
Article · August 28, 2026
ರಾಮಣ್ಣನ ಚುಟುಕುಗಳು
ರಾಮಣ್ಣ ಚೆನ್ನಾಂಗೋಡು
" ಝೆನ್ -ಝಿ"
ಝೆನ್ಝಿ ಎಂದರೆ ಭಾವ
ನಮ್ಮ ಯುವ ರಕ್ತ I
ಜಾತಿಮತಗಳ ಗಡಿಯ
ದಾಟಿ ಅದು ಮುಕ್ತ II
ಇಲ್ಲು ತೊಡಗಿದೆ ಈಗ
ಅವರ ರಂಪಾಟ I
ಆಗಿಬಿಟ್ಟಿತು ದೆಹಲಿ
"ಕಪಿಹೊಕ್ಕ ತೋಟ"! II
" ಧರಣಿ "
ರಾಜಧಾನಿಯಲೀಗ
ಧರಣಿಗಳ ಸಂತೆ I
ಹರಿಯತೊಡಗಿದೆ ಭಾವ
ಸುದ್ದಿಗಳ ಕಂತೆ II
ಉಪ್ಪುಹುಳಿ ಖಾರಗಳು
ಇರಬಹುದು, ಅಡಕ II
ಖಾತ್ರಿಯಾಗಲು ಓದಿ
ತೊಟ್ಟು "ಕನ್ನಡಕ " II
ಮೀಸಲಾತಿ
ಮೀಸಲಾತಿಯಲುಂಟು
ಎಲ್ಲರಿಗು ಪಾಲು I
ಸಾಮಾನ್ಯ ವರ್ಗಕ್ಕೆ
ಇದರಿಂದ ಸೋಲು I
ಎಲ್ಲ ಹಂಚಿಕೆಯಾಗಿ
ಉಳಿದಲ್ಲಿ ಉಂಟು I
ಸರ್ಕಾರಿ ಉದ್ಯೋಗ
ಕನ್ನಡಿಯ ಗಂಟು ! II
Creative Writings
