Karada Vishwa

News · March 15, 2026

ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂಗಳವರ 76ನೇ ವರ್ಧಂತ್ಯುತ್ಸವದ ನಿಮಿತ್ತ ಶೃಂಗೇರಿ ಭೇಟಿ

ದಿನಾಂಕ : 20-03-2026

ಪ್ರಿಯ ಕರಾಡ ಬಂಧುಗಳೇ...
ಇದೇ ಮಾರ್ಚ್ 20 ರಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂಗಳವರ  76ನೇ ವರ್ಧಂತ್ಯುತ್ಸವವು ನಡೆಯುವ ಹಿನ್ನೆಲೆಯಲ್ಲಿ ಕರಾಡ ಬ್ರಾಹ್ಮಣ ಸಮಾಜದ  ಸಮಸ್ತ ಶಿಷ್ಯ ವರ್ಗಕ್ಕೆ 20-03.2026ನೇ ಶುಕ್ರವಾರದಂದು ಶೃಂಗೇರಿಯ ಪುಣ್ಯಭೂಮಿಯಲ್ಲಿ ಗಾಯತ್ರಿ ಮಂತ್ರದ ಜಪಾನುಷ್ಠಾನವನ್ನು ನಡೆಸಬೇಕೆಂದು ಕರೆ ಬಂದಿರುತ್ತದೆ. ಈ ನಿಮಿತ್ತ  ಕರಾಡ ಸಮುದಾಯ ಆ ದಿನ ಶೃಂಗೇರಿಗೆ ಹೋಗಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಮಹಿಳೆಯರಿಗೂ ಶ್ರೀ ದುರ್ಗಾ ಸಪ್ತಶ್ಲೋಕೀ ಸ್ತೋತ್ರ ಪಠಣದಲ್ಲಿ ಭಾಗವಹಿಸಿ ಕೃತಾರ್ಥರಾಗಬಹುದು. 
ಆಸಕ್ತರು ಈ ಕೆಳಗಿನವರನ್ನು ತಾ. 18.3.2026 ಮಧ್ಯಾಹ್ನದೊಳಗೆ ಸಂಪರ್ಕಿಸಬಹುದು 

ಶ್ರೀ ರಮಾನಂದ ಎಡಮಲೆ- 
9446297058

ಶ್ರೀ ಗಣೇಶ ಚೇರ್ಕೂಡ್ಲು-
9495180395
 
( 9 ಗಂಟೆಗೆ ಶೃಂಗೇರಿಗೆ ತಲುಪಬೇಕಿರುವುದರಿಂದ ಬೆಳಗ್ಗೆ ಐದು ಗಂಟೆಗೆ ಹೊರಡಬೇಕಾಗಬಹುದು. ಬೆಳಗ್ಗೆ 10 ರಿಂದ ಸುಮಾರು 12 ಗಂಟೆವರೆಗೆ ಅಲ್ಲಿ ಕಾರ್ಯಕ್ರಮ. ಮಧ್ಯಾಹ್ನ ಮೇಲೆ ಊರಿಗೆ ಮರಳುವುದು)