
Article · June 26, 2026
ಅಗಲ್ಪಾಡಿ
ಸಂಧ್ಯಾ ಕೊರೆಕ್ಕಾನ
ಸುತ್ತ ಹಸಿರು ವನದ ನಡುವೆ
ಕಂಗೊಳಿಸುವ ಆಲಯ
ಗರ್ಭಗುಡಿಯ ಒಳಗೆ ನೋಡು
ತಾಯಿ ದುರ್ಗಾದೇವಿಯ
ಭೇರಿ ಶಬ್ದ ಕೇಳುತಿದೆ
ನಂದಾದೀಪ ಉರಿಯಲು
ಆರತಿಯು ಬೆಳಗುತಿದೆ
ನಿನ್ನ ಪೂಜೆ ಗೈಯಲು
ಬೆಲ್ಲದಕ್ಕಿ ಪಾಯಸವು
ಪ್ರೀತಿಯ ನೈವೇದ್ಯವು
ಮೂರು ಹೊತ್ತು ಸೇವೆ ನಿನಗೆ
ಕೇಳು ಘಂಟಾ ನಾದವು
ಶುಭವ ತರುವ ದೇವಿ ಇವಳು
ಸರ್ವ ಶಕ್ತಿ ಅಂಬಿಕೆ
ಶುದ್ಧ ಮನವ ಕೊಡುವಳೆಂದು
ಭಕ್ತ ಜನರ ನಂಬಿಕೆ
ಕಣ್ಣನೊತ್ತಿಕೊಳುವರೆಲ್ಲ
ಮೂರ್ತಿ ಕಣ್ಣ ತುಂಬುತ
ವರವ ಕೊಡು ನಮಗೆಂದು
ನಿನ್ನಂಘ್ರಿಗೆ ಎರಗುತ
Creative Writings
