
News · August 21, 2026
ಶ್ರೀ ರವಿಶಂಕರ ಭಾರದ್ವಾಜರಿಗೆ ಮಿತ್ತೂರು ವೈದಿಕ ಪ್ರಶಸ್ತಿ -2026
ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು
ಸುಳ್ಯ ಭಾರದ್ವಾಜಾಶ್ರಮದಲ್ಲಿ ಕಾಂಚಿ ಕಾಮಕೋಟಿ ವೇದ ವಿದ್ಯಾಲಯವನ್ನು 2001 ರಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ರವಿಶಂಕರ ಭಾರದ್ವಾಜರು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವತಿಯಿಂದ ಪ್ರದಾನ ಮಾಡಲಾಗುವ “ಬ್ರಹ್ಮಶ್ರೀ ಮಿತ್ತೂರು ಪುರೋಹಿತ ಕೃಷ್ಣ ಭಟ್ಟ ಸಂಸ್ಮರಣ ವೈದಿಕ ಪ್ರಶಸ್ತಿ – 2026” ಗೆ ಭಾಜನರಾಗಿರುವುದು ಕರಾಡ ಸಮಾಜಕ್ಕೆ ಹೆಮ್ಮೆಯ ಸಂಗತಿ.
ವೈದಿಕ ಶಿಕ್ಷಣ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಹಲವು ವರ್ಷಗಳಿಂದ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀಯುತ ರವಿಶಂಕರ ಭಾರದ್ವಾಜರ ಜ್ಞಾನ,ನಿಷ್ಠೆ, ಸೇವಾ ಮನೋಭಾವ ಹಾಗೂ ವೈದಿಕ ಕ್ಷೇತ್ರದ ಕೊಡುಗೆಗೆ ಸಂದಿರುವ ಈ ಗೌರವ ಅತ್ಯಂತ ಅಭಿನಂದನೀಯ.
ಅವರ ನಿರಂತರ ಸೇವೆಯನ್ನು ಗುರುತಿಸಿ ನೀಡಲಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ಇನ್ನಷ್ಟು ವೈದಿಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ. ಅವರ ಜ್ಞಾನಸೇವೆ ಹಾಗೂ ಸಮಾಜಮುಖಿ ಕಾರ್ಯಗಳು ಮತ್ತಷ್ಟು ವಿಸ್ತರಿಸಲಿ ಎಂದು ಹಾರೈಸುತ್ತಾ,
ಕರಾಡ ವಿಶ್ವದ ವತಿಯಿಂದ ಶ್ರೀ ರವಿಶಂಕರ ಭಾರದ್ವಾಜರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.



