
Article · September 9, 2026
ಕಜಮಲೆ ಕ್ಷೇತ್ರದ ಶ್ರೀ ವಿಷ್ಣುಮೂರ್ತಿಯೇ ....
By ರಾಧಾಕೃಷ್ಣಭಟ್ ಕುರುಮುಜ್ಜಿ
ಕಜಮಲೆಯಲ್ಲಿನೆಲೆಸಿರುವ ಶ್ರೀವಿಷ್ಣುಮೂರ್ತಿ ದೇವರ ಕುರಿತು ಬರೆದ ಭಕ್ತಿಗೀತೆ.....
ಪಲ್ಲವಿ :
ಕಜಮಲೆ ಕ್ಷೇತ್ರದ ಶ್ರೀವಿಷ್ಣುಮೂರ್ತಿಯೆ...
ಅನುಪಲ್ಲವಿ :
ನಿನಗೆ ನಮಿಸುತ ತಲೆ ಬಾಗುವೆ
ನಿನಗೆ ನಮಿಸುತ ತಲೆಬಾಗುವೆ
ಚರಣಗಳು :
ಕಾರ್ಣಿಕ ಕ್ಷೇತ್ರದಿ ನೀ ನೆಲೆಸಿರುವೆ
ಭಕ್ತರಿಗಭಯವ ಕರುಣಿಸುತಿರುವೆ
ಪ್ರಕೃತಿಯ ಸೊಬಗಿನ ತಾಣದಲಿರುವೆ
ತಾಣದಿ ಸೊಗಸಿನ ಗುಡಿಯಲ್ಲಿರುವೆ (ಪಲ್ಲವಿ)
ದರುಶನ ಭಾಗ್ಯವ ಒದಗಿಸಿಕೊಡುವೆ
ಸಾವಿರ ನಾಮದಿ ಶೋಭಿಸುವೆ
ಮರೆಯಲಿ ನಿಂತು ಮೊರೆಯನ್ನಾಲಿಸುವೆ
ಮನದ ಅಭೀಷ್ಟವ ಈಡೇರಿಸುವೆ (ಪಲ್ಲವಿ)
ಕತ್ತಲೆಯಲ್ಲಿ ಬೆಳಕಾಗಿ ಬರುವೆ
ಕಜಮಲೆ ಕ್ಷೇತ್ರದ ಶ್ರೀ ವಿಷ್ಣುಮೂರ್ತಿಯೆ
ಶರಣಾಗತನಾಗಿ ನಿನ್ನಲಿ ಬೇಡುವೆ
ದೇವಾ ಶರಣು ಶರಣೆನ್ನುವೆ. (ಪಲ್ಲವಿ)
****************
Creative Writings
