Karada Vishwa

News · March 25, 2026

ಪೆರ್ಲ ಕೊಡೆಂಕಿಲ ಮೂಲದ ಪ್ರತಿಭೆ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

- 'ವಿಶೇಷ ಚಾನೆಲ್' ವರದಿ

ಪೆರ್ಲ : ಫಸ್ಟ್ ಟೆಕ್ ಚಾಲೆಂಜ್ ಸಂಸ್ಥೆಯು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಪಡ್ರೆ ಕೊಡೆಂಕಿಲ ಮೂಲದ ಶೌರಿ ಬಹುಮಾನ ಗಳಿಸಿ ವಿಶ್ವ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಅಮೆರಿಕದ ಹೂಸ್ಟನ್ ನಗರದಲ್ಲಿ ನಡೆಯುವ ಮುಂದಿನ ಹಂತದ ಸ್ಪರ್ಧೆಯಲ್ಲಿ 60 ದೇಶದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ .  

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದ ಶೌರಿ , ರವಿಶಂಕರ ಕೊಡೆಂಕಿಲ - ಶೈಲಿ ದಂಪತಿಗಳ ಪುತ್ರ .  ಕೊಡೆಂಕಿಲ (ಬರೆಕರೆ )  ವಾಸುದೇವ ಭಟ್ ,  ಸುಗುಣ ದಂಪತಿ ಹಾಗೂ ಮಂಗಳೂರು ಅಶೋಕ ನಗರದ ಕೆ. ಚಂದ್ರಮೋಹನ್ ( ನಿವೃತ್ತ ಬಿ ಎಸ್ ಎನ್ ಎಲ್ ಇಂಜಿನಿಯರ್ ), ಅರುಣ ಪ್ರಭಾ ದಂಪತಿಗಳ ಮೊಮ್ಮಗನಾಗಿದ್ದಾನೆ.

ಪೆರ್ಲ ಕೊಡೆಂಕಿಲ ಮೂಲದ ಪ್ರತಿಭೆ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ