Karada Vishwa

News · November 4, 2026

ಶ್ರೀಯುತ ವಿಷ್ಣು ಭಟ್ ಮಜಕ್ಕಾರು ಅವರ ಚಿಕಿತ್ಸೆಗಾಗಿ ಧನ ಸಹಾಯ ಅಪೇಕ್ಷೆ

ಕರಾಡ ಸಹಾಯಕ ಬಂಧು

Karada Sahayaka Bandhu Charitable Trust

  • Account No - 120037428483

  • Ifsc code - CNRB0004489

  • Upi ID - 335350921428483@cnrb

  • Karada Sahayaka Bandhu charitable trust phone no - 7994390395

ಬಂಧುಗಳೇ,

ಶ್ರೀಯುತ ವಿಷ್ಣು ಭಟ್(65) ಮಜಕ್ಕಾರು ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯ ನಿಮಿತ್ತ ಆಗಾಗ ಆಸ್ಪತ್ರೆಗೆ ಅಡ್ಮಿಟ್ ಆಗಿ ಮನೆಯಲ್ಲಿ ಶೈಯ್ಯಾವಸ್ಥೆಯಲ್ಲಿ ಇದ್ದು ಸದ್ಯ ಕಳೆದ 11 ದಿನಗಳಿಂದ ಶರೀರದಲ್ಲಿ ಶುಗರ್,ನಂಜು (infection ), ಕಿಡ್ನಿ ವೈಫಲ್ಯ ಹಾಗೂ ಇತರ ತೊಂದರೆಗಳಿಂದ ಕಾಸರಗೋಡಿನ *ಕೇರ್ ವೆಲ್* ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಐಸಿಯು ನಲ್ಲಿ 10 ದಿನದ ಚಿಕಿತ್ಸೆ ನಂತರ ಈಗ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವೈದ್ಯರ ಪ್ರಕಾರ ಇನ್ನೂ ಒಂದು ವಾರದ ಆಸ್ಪತ್ರೆ ಆರೈಕೆ ಅವಶ್ಯಕತೆ ಇದೆ.

ಅವರ ಪತ್ನಿ ಶ್ರೀಮತಿ ಚಂದ್ರಿಕಾ ಅವರು ಕೊಟ್ಟ ಮಾಹಿತಿ ಪ್ರಕಾರ ಈಗಾಗಲೇ ಈ ಆಸ್ಪತ್ರೆಯಲ್ಲಿ tracheotomy ಶಸ್ತ್ರಚಿಕಿತ್ಸೆಯು ಸೇರಿ 2 ಲಕ್ಷಗಳಷ್ಟು ಚಿಕಿತ್ಸಾ ಬಿಲ್ ಆಗಿದ್ದು ಇದರಲ್ಲಿ ಸುಮಾರು 60,000 ಗಳಷ್ಟು ಬಿಲ್ಲು ಕಟ್ಟಿಕೊಂಡಿದ್ದು ಇನ್ನೂ ಸುಮಾರು ಎರಡರಿಂದ ಎರಡುವರೆ ಲಕ್ಷಗಳಷ್ಟು ಚಿಕಿತ್ಸಾ ವೆಚ್ಚದ ಅಂದಾಜನ್ನು ಹೇಳಿರುತ್ತಾರೆ.

ಆರ್ಥಿಕವಾಗಿ ತೀರ್ವ ಸಂಕಷ್ಟದಲ್ಲಿರುವ ಈ ಕುಟುಂಬದಲ್ಲಿ ವಿಷ್ಣು ಭಟ್ ಅವರ ಅಣ್ಣ ಗುರುವಾಯೂರಪ್ಪ ಭಟ್ ಮಾನಸಿಕ ಅಸ್ವಸ್ಥರಾಗಿದ್ದು ಸದ್ಯ ವಿಷ್ಣು ಭಟ್ ಅವರ ಅಸೌಖ್ಯ ನಿಮಿತ್ತ ನಿರಾಶ್ರಿತರಾಗಿದ್ದು ಸಮೀಪ ಸಂಬಂಧಿಗಳು ಹಾಗೂ ಇಷ್ಟ ಮಿತ್ರರ ಸಹಾಯದಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಇಂದು ಅಡ್ಮಿಟ್ ಆಗಿರುತ್ತಾರೆ.

ಈ ಕಾರಣದಿಂದ ಚಿಕಿತ್ಸಾ ಸಹಾಯದ ಅಪೇಕ್ಷೆಯ ಮೇರೆಗೆ ವಿಷ್ಣು ಭಟ್ಟ ಅವರ ಮುಂದಿನ ಚಿಕಿತ್ಸೆಗೆ ಕರಾಡ ಸಹಾಯಕ ಬಂಧು ಟ್ರಸ್ಟ್ ಖಾತೆಯಲ್ಲಿ ಈಗಾಗಲೇ ಇರುವ ಚಿಕಿತ್ಸಾ ತುರ್ತು ಸಹಾಯ ನಿಧಿ(ರೂ.1,20,570)ಯಿಂದ 50,000 ರೂಪಾಯಿಗಳ ಚಿಕಿತ್ಸಾ ಸಹಾಯವನ್ನು ಕೊಡುತ್ತಿದ್ದು ಅವರ ಮುಂದಿನ ಚಿಕಿತ್ಸೆಗೆ ಸಮಾಜದ ಕಡೆಯಿಂದ ನಮ್ಮ ಈ ವ್ಯವಸ್ಥೆಯ ಮೂಲಕ ಸಹಾಯವನ್ನು ಯಾಚಿಸುತ್ತಿದ್ದೇವೆ. ಈ ಸಂಬಂಧ ಬಂದಂತಹ ಮೊತ್ತವನ್ನು ಅವರ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಅವಲೋಕಿಸಿಕೊಂಡು ಸಹಕರಿಸುವುದೆಂದು ನಿಮ್ಮೆಲ್ಲರ ಪರವಾಗಿ ನಿರ್ಧರಿಸಲಾಗಿದೆ.

ಈ ಸಂಬಂಧ ಸಮಾಜ ಬಾಂಧವರು ಮೇಲೆ ಕೊಟ್ಟಂತಹ ಟ್ರಸ್ಟ್ ಖಾತೆಗೆ ತಮ್ಮಕಡೆಯ ಉದಾರ ಸಹಾಯವನ್ನು ಕೊಟ್ಟು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಕರಾಡ ಸಹಾಯಕ ಬಂಧು

3-11-2026

Sahayaka Bhandu