Karada Vishwa

News · September 28, 2026

ಚಂಡಿಕಾ ಯಾಗ ಹಾಗೂ ಕರಾಡ ಕಲೋತ್ಸವ – 2026

ಸಂಕ್ಷಿಪ್ತ ವರದಿ

ಕರಾಡ ಬ್ರಾಹ್ಮಣ ಸಮಾಜ (ರಿ.), ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ “ಚಂಡಿಕಾ ಯಾಗ ಹಾಗೂ ಕರಾಡ ಕಲೋತ್ಸವ – 2026” ಕಾರ್ಯಕ್ರಮವು ಸೆಪ್ಟೆಂಬರ್ 20, 2026ರಂದು ಬಸವನಗುಡಿಯ ಶ್ರೀ ಭಾರತೀ ತೀರ್ಥ ಸಭಾಂಗಣದಲ್ಲಿ ಬೆಳಗ್ಗೆ 6:30ರಿಂದ ಸಂಜೆ 6:00ರವರೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಸಮಾಜದ ಅಧ್ಯಕ್ಷ ಸರ್ವ ಶ್ರೀ/ಶ್ರೀಮತಿ ಹರೀಶ್ ಭಟ್ ಆಟಿಕುಕ್ಕೆ, ಉಪಾಧ್ಯಕ್ಷ ಗಣಪತಿ ಭಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕುದ್ಕುಳಿ, ಖಜಾಂಚಿ ಚಂದ್ರಹಾಸ್ ಕನ್ನಡ್ಕ, ಜತೆ ಕಾರ್ಯದರ್ಶಿ ನಾಗರಾಜ ಉಪ್ಪಂಗಳ ಹಾಗೂ ಪಾಂಡುರಂಗ ಗುರ್ಜರ್ , ಅಶ್ವಿನಿ ರವಿಚಂದ್ರ , ವೇಣು ಕನಿಯಾಲ, ರವಿಕೇಶವ ಕೆ ಎಂ , ಉತ್ತಮ ಕೊರೆಕ್ಕಾನ ಇವರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರ ಯೋಜನಾಬದ್ಧ ಶ್ರಮ ಮತ್ತು ಅನೇಕ ಸ್ವಯಂಸೇವಕರ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬೆಂಗಳೂರು ಸೇರಿದಂತೆ ಕಾರ್ಕಳ, ಮಂಗಳೂರು, ಉಡುಪಿ, ಪೆರ್ಲ, ಹುಬ್ಬಳ್ಳಿ, ಕೊಪ್ಪ ಮುಂತಾದ ವಿವಿಧೆಡೆಯಿಂದ 650ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಬೆಳಗ್ಗಿನ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಭಟ್ ಆವಳಮಠ ಅವರ ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಯಾಗ ಶ್ರದ್ಧಾಭಕ್ತಿಯಿಂದ ನೆರವೇರಿತು. ನಂತರ ಭಗವದ್ಗೀತೆ, ಸಮೂಹ ಗಾಯನ, ಅಚೀವರ್ಸ್ ಆಫ್ ಇಂಡಿಯಾ, ಏಕಪಾತ್ರಾಭಿನಯ/ಏಕನೃತ್ಯ, ವಾದ್ಯಸಂಗೀತ ಹಾಗೂ ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಈ ಬಾರಿಯ ವಿಶೇಷ ಆಕರ್ಷಣೆಯಾಗಿದ್ದ “ಬುದ್ಧಿ ಯುದ್ಧ” ಡಿಜಿಟಲ್ ಕ್ವಿಝ್ನಲ್ಲಿ ಸಭಾಂಗಣದಲ್ಲಿದ್ದ ಬಂಧುಗಳು ಮೊಬೈಲ್ ಮೂಲಕ QR Code ಸ್ಕ್ಯಾನ್ ಮಾಡಿ ಉತ್ಸಾಹದಿಂದ ಭಾಗವಹಿಸಿದರು.

ಚಂಡಿಕಾ ಯಾಗದ ಪೂರ್ಣಾಹುತಿಯ ಬಳಿಕ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ಸಾಧಕರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಆಕಾಶ್ ಪಿ, ಅವನಿ ಶರ್ಮಾ, ಸೌಮ್ಯಾ ಕುಂಟಿಕಾನ, ಡಾ. ವೇಣುಗೋಪಾಲ ಭಟ್ ಕನಿಯಾಲಜಾಲು, ಪೃಥ್ವಿಶ್ರೀ, ಸೂರ್ಯನಾರಾಯಣ ಭಟ್ ಸೈಪಂಗಲ್ಲು, ಮಾಧವ ಭಟ್ ಅಂಬೇಕರ್ ಹಾಗೂ 'ಕರಾಡ ಸಹಾಯಕ ಬಂಧು' ವಿಶೇಷವಾಗಿ ಸನ್ಮಾನಿಸಲ್ಪಟ್ಟರು. ಪೂರ್ವಿ ಎ ಭಾರದ್ವಾಜ್ , ಸಂಪ್ರೀತ್ ಪಿ ಎಂ , ಆದ್ಯಾ ಬಿ ಪಡ್ರೆ, ತನ್ವಿ ಭಟ್ , ಕನ್ನಿಕಾ ರಮೇಶ್ ಭಟ್ , ಶ್ರಾವ್ಯ ಪಿ ಪರಾಡ್ಕರ್ , ಮೇಧಾ ಜಿ ಭಟ್ , ಸ್ತುತಿ ವಿನಯ್ ಲೋಕರೆ , ಡಾ. ಸಂಜನಾ ಎಸ್ ರಾವ್ , ವರೇಣ್ಯ , ಆದಿತ್ಯ ಭಾರದ್ವಾಜ್ , ನೇಹಾ ಗುರ್ಜರ್ , ರವಿ ಭಾರದ್ವಾಜ್ , ಅನನ್ಯ ಶ್ರೀಧರ್ - ಇವರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಾಗಿ ಗೌರವಿಸಲ್ಪಟ್ಟರು .

ಸಮಾಜದ ಉದ್ಯಮಿಗಳು ಹಾಗೂ ಮಹಿಳೆಯರು ಆಯೋಜಿಸಿದ್ದ ವಿವಿಧ ಮಳಿಗೆಗಳು (Stalls), ಸಾಂಪ್ರದಾಯಿಕ ತಿನಿಸುಗಳು, ಕರಕುಶಲ ವಸ್ತುಗಳು ಮತ್ತು ಗೃಹ ಉತ್ಪನ್ನಗಳು ವಿಶೇಷ ಆಕರ್ಷಣೆಯಾಗಿದ್ದವು. ಮಧ್ಯಾಹ್ನ ಎಲ್ಲ ಅಭ್ಯಾಗತರಿಗೆ ಪ್ರಸಾದ ಹಾಗೂ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನದ ನಂತರ ಛದ್ಮವೇಷ, ಮಕ್ಕಳ ವೇಷಭೂಷಣ ಹಾಗೂ “ಆದರ್ಶ ದಂಪತಿ” ಸ್ಪರ್ಧೆಗಳು ನಡೆದವು. ಕಾರ್ಯಕ್ರಮವನ್ನು ಶ್ರೀಮತಿ ಹರ್ಷಿತಾ ಪರಾಡ್ಕರ್ ಅವರು ತಮ್ಮ ಸೊಗಸಾದ ನಿರೂಪಣೆಯ ಮೂಲಕ ನಡೆಸಿಕೊಟ್ಟರೆ, ಸಾಧಕರು ಹಾಗೂ ರಾಂಕ್ ವಿಜೇತರ ಸನ್ಮಾನ ಕಾರ್ಯಕ್ರಮವನ್ನು ಶ್ರೀಮತಿ ಶ್ರದ್ಧಾ ಚೇತನ್ ಕನ್ನಡ್ಕ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.

ಒಟ್ಟಿನಲ್ಲಿ ಚಂಡಿಕಾಯಾಗ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಉತ್ತಮ ವ್ಯವಸ್ಥೆಯೊಂದಿಗೆ ಯೋಜನೆಯಂತೆ ನಡೆದವು. ಸಮಿತಿಯ ಸದಸ್ಯರು ಆತ್ಮೀಯವಾಗಿ ಅತಿಥಿಗಳನ್ನು ಬರಮಾಡಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಊಟವು ರುಚಿಕರವಾಗಿದ್ದು, ಅಡುಗೆ ಮತ್ತು ಪ್ರಸಾದ/ಊಟ ವಿತರಣೆ ಕಾರ್ಯದಲ್ಲಿ ತೊಡಗಿದ್ದ ಸ್ವಯಂಸೇವಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಪೂಜ್ಯ ಸ್ವಾಮೀಜಿಯವರ ಆಗಮನ ಹಾಗೂ ಆಶೀರ್ವಚನ ಎಲ್ಲರಿಗೂ ಪ್ರೇರಣಾದಾಯಕವಾಗಿತ್ತು. ವೇಳಾಪಟ್ಟಿಯಲ್ಲಿ ಸ್ವಲ್ಪ ವಿಳಂಬವಾದರೂ ಕಾರ್ಯಕ್ರಮದ ಗುಣಮಟ್ಟಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ವೇದಿಕೆ ಕಾರ್ಯಕ್ರಮಗಳು ಮನರಂಜನಾತ್ಮಕವಾಗಿದ್ದು ಪ್ರೇಕ್ಷಕರನ್ನು ಆಕರ್ಷಿಸಿದವು. ಬಹುಮಾನಗಳು ಮತ್ತು ಸನ್ಮಾನಗಳನ್ನು ಅಚ್ಚುಕಟ್ಟಾಗಿ ವಿತರಿಸಲಾಯಿತು. ಸ್ಮರಣಿಕೆಗಳ ವಿನ್ಯಾಸ ಹಾಗೂ ವೇದಿಕೆಯ ಅಲಂಕಾರ ಕಾರ್ಯಕ್ರಮದ ಘನತೆಗೆ ತಕ್ಕಂತಿತ್ತು.

ಕರಾಡ ವಿಶ್ವ ಎಂದಿನಂತೆ ಎಲ್ಲರ ಗಮನ ಸೆಳೆಯಿತು. ಸ್ಥಳದಲ್ಲಿಯೇ ರಸೀದಿ ನೀಡುವ ವ್ಯವಸ್ಥೆ ಹಾಗೂ ಸಂಗ್ರಹಣೆಯ ಮಾಹಿತಿಯನ್ನು ತಕ್ಷಣ ಪಡೆಯುವ ಹೊಸ ಸೌಲಭ್ಯಗಳು ಹಲವಾರು ರೀತಿಯಲ್ಲಿ ಉಪಯುಕ್ತವಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದವು.

ಕಾರ್ಯಕ್ರಮ ಮುಗಿಸಿ ತೆರಳುವಾಗ ಎಲ್ಲರ ಮುಖದಲ್ಲೂ ಕಂಡ ಸಂತೋಷ ಮತ್ತು ತೃಪ್ತಿಯ ನಗು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.

ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ವೈಭವ, ಪ್ರತಿಭಾ ಪುರಸ್ಕಾರ, ಮನರಂಜನೆ ಮತ್ತು ಸಮಾಜದ ಏಕತೆಯ ಸುಂದರ ಸಂಗಮವಾಗಿದ್ದ “ಕರಾಡ ಕಲೋತ್ಸವ – 2026” ಸಂಜೆ 6:00ಕ್ಕೆ “ವಂದೇ ಮಾತರಂ” ಗೀತೆಯೊಂದಿಗೆ ಸಂಪನ್ನಗೊಂಡಿತು.

ಒಟ್ಟಾರೆ, ಸ್ವಯಂಸೇವಕರು, ಯುವಕರ ತಂಡ, ಪದಾಧಿಕಾರಿಗಳು, ದಾನಿಗಳು ಹಾಗೂ ಸದಸ್ಯರ ಸಮರ್ಪಿತ ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಒಂದು ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂತು. ಅವಿರತವಾಗಿ ಶ್ರಮಿಸಿದ ಎಲ್ಲ ಸ್ವಯಂಸೇವಕರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

Community
ಚಂಡಿಕಾ ಯಾಗ ಹಾಗೂ ಕರಾಡ ಕಲೋತ್ಸವ – 2026