Karada Vishwa

Article · September 14, 2026

ಹುತ್ತದ ಮಣ್ಣಿನಿಂದ ತಯಾರಿಸಿದ ನಮ್ಮ ಮನೆಯ ಸಂಭ್ರಮ - ನಮ್ಮ ಗಣಪ

ರಕ್ಷಿತಾ ನುಳಿಯಾಲು.

ಪ್ರಕೃತಿಯ ಮಡಿಲಿನಿಂದ ದೊರೆತ ಹುತ್ತದ ಮಣ್ಣಿಗೆ ಭಕ್ತಿಯ ಸ್ಪರ್ಶ ನೀಡಿ, ಕೈಚಳಕದಿಂದ ರೂಪುಗೊಂಡ ನಮ್ಮ ಮನೆಯ ಗಣಪ ಈ ಬಾರಿಯ ಗಣೇಶ ಚತುರ್ಥಿಯ ವಿಶೇಷ ಆಕರ್ಷಣೆ.

ಮಣ್ಣಿನ ಮೂರ್ತಿಯಲ್ಲಿ ಮೂಡಿರುವುದು ಕೇವಲ ಗಣಪನ ರೂಪವಲ್ಲ; ಅದರೊಳಗೆ ನಮ್ಮ ಸಂಪ್ರದಾಯ, ನಂಬಿಕೆ, ಪರಿಸರ ಕಾಳಜಿ ಹಾಗೂ ಮನೆಯವರ ಒಗ್ಗಟ್ಟಿನ ಭಾವನೆಯೂ ಅಡಗಿದೆ.

ಸ್ವತಃ ತಯಾರಿಸಿದ ಈ ಮಣ್ಣಿನ ಗಣಪನನ್ನು ಮನೆಯಲ್ಲಿರಿಸಿ ಪೂಜಿಸುವ ಕ್ಷಣವೇ ಒಂದು ವಿಶೇಷ ಸಂತೋಷ. ಸರಳತೆಯಲ್ಲಿರುವ ಸೌಂದರ್ಯ, ಭಕ್ತಿಯಲ್ಲಿರುವ ಶಕ್ತಿ ಮತ್ತು ನಮ್ಮ ಪರಂಪರೆಯಲ್ಲಿರುವ ಹೆಮ್ಮೆ - ಇವೆಲ್ಲವನ್ನೂ ಈ ಗಣಪ ನಮ್ಮ ಮನೆಗೆ ತರುತ್ತಾನೆ.

ವಿಘ್ನ ವಿನಾಶಕ ಶ್ರೀ ಗಣಪತಿಯ ಆಶೀರ್ವಾದ ಸದಾ ನಮ್ಮ ಮನೆ-ಮನಗಳಲ್ಲಿ ನೆಲೆಸಿರಲಿ.

ArtHeritage