
Event · June 22, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಯಕ್ಷಗಾನ ತಾಳಮದ್ದಳೆ
ಕರ್ಕಾಟಕ ಮಾಸದಲ್ಲಿ ನಡೆಯುವ ದುರ್ಗಾ ಸೇವೆ (17-07-2026 to 28-07-2026), ಶ್ರೀದೇವಿಗೆ ವಿಶೇಷ ಲಕ್ಷಾರ್ಚನಾ ಸೇವೆ , ತಾಳಮದ್ದಳೆ (28-07-2026)
.
ಆತ್ಮೀಯ ಭಗವದ್ಭಕ್ತರೇ,
ಕರ್ಕಾಟಕ ಮಾಸದಲ್ಲಿ ನಡೆಯುವ ದುರ್ಗಾ ಸೇವೆಯು 17-07-2026 ಶುಕ್ರವಾರ ಮೊದಲ್ಗೊಂಡು 28-07-2026 ಮಂಗಳವಾರ ರಾತ್ರಿ ದೀಪಾರಾಧನೆ ಹಾಗೂ ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಳ್ಳಲಿರುವುದು.
ಭಗವದ್ಭಕ್ತರು ಈ ವಿಶೇಷ ದಿನಗಳಲ್ಲಿ ದೀಪಾರಾಧನಾ ಸೇವೆಯನ್ನು(ಪ್ರತಿದಿನ ಒಂದು ದೀಪಾರಾಧನೆ)ಮಾಡಿಸಬಹುದಾಗಿದೆ.
ತಾರೀಕು 28.07.2026 ಮಂಗಳವಾರದಂದು ಪ್ರಾತಃಕಾಲ ಶ್ರೀದೇವಿಗೆ ವಿಶೇಷ ಲಕ್ಷಾರ್ಚನಾ ಸೇವೆಯೂ ಜರಗಲಿರುವುದು.
ಅಪರಾಹ್ನ 2 ಗಂಟೆಯಿಂದ 6 ಗಂಟೆಯ ತನಕ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿoದ 'ತಾಳಮದ್ದಳೆ ' ಕಾರ್ಯಕ್ರಮ ಇದೆ.
ಈ 12 ದಿವಸಗಳಲ್ಲಿ ಸಾಯಂ ಗಂಟೆ 6:30 ರಿಂದ 7.30 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ಜರಗಲಿರುವುದು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗಾಗಿ ಶ್ರೀ ಕ್ಷೇತ್ರದ ಕಾರ್ಯಾಲಯ 8547084250 ಸಂಪರ್ಕಿಸಬೇಕಾಗಿ ವಿನಂತಿ.
ಇತೀ
ಆಡಳಿತ ಮಂಡಳಿ
