
News · June 22, 2025
ವಿಷ್ಣು ಶರ್ಮ ಪಂಜರಿಕೆ ಅವರಿಗೆ ಹಾರ್ದಿಕ ಅಭಿನಂದನೆಗಳು
ವಿಷ್ಣು ಶರ್ಮಾ ಅವರು ಮಲಯಾಳದ ಖ್ಯಾತ ಹಿನ್ನೆಲೆಗಾಯಕರೂ, ಭಾವಗಾಯಕರೂ ಆದ ಪಿ. ಜಯಚಂದ್ರನ್ ಅವರಿಗೆ ವಿಶೇಷ ಸಂಗೀತ ನಮನವನ್ನು ಸಮರ್ಪಿಸುವ ಜಯಚಂದ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ನಮ್ಮ ಕರಾಡ ಸಮಾಜದ ಯುವ ಪ್ರತಿಭೆ ವಿಷ್ಣು ಶರ್ಮ ಅವರು ತ್ರಿಶೂರಿನಲ್ಲಿ ಜೂನ್ 29ರಂದು ನಡೆಯುವ ಜಯಚಂದ್ರೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆಗಾಯಕರುಗಳ ಜೊತೆಗೆ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ.
ವಿಷ್ಣು ಶರ್ಮಾ ಅವರು ಮಲಯಾಳದ ಖ್ಯಾತ ಹಿನ್ನೆಲೆಗಾಯಕರೂ, ಭಾವಗಾಯಕರೂ ಆದ ಪಿ. ಜಯಚಂದ್ರನ್ ಅವರಿಗೆ ವಿಶೇಷ ಸಂಗೀತ ನಮನವನ್ನು ಸಮರ್ಪಿಸುವ ಜಯಚಂದ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ಕೇವಲ ಹಾಡುಗಳನ್ನು ಹಾಡುವ ಕಾರ್ಯಕ್ರಮವಲ್ಲ – ಅದು ಹೃದಯದಿಂದ ಹೊರಡುವ ಒಂದು ನಮನ, ಒಂದು ಗೌರವ.
ಪಂಜರಿಕೆ ಮನೆತನದ ಶ್ರೀ ವಿಷ್ಣು ಶರ್ಮ, ಶ್ರೀ ಸುಧಾಕರ ಭಟ್ ಮತ್ತು ಶ್ರೀಮತಿ ವಿನೀತಾರ ಪುತ್ರ. ಅವರು ತಮ್ಮ ಸಂಗೀತ ಶಿಕ್ಷಣವನ್ನು ಆರಂಭದಲ್ಲಿ ಸಾವಿತ್ರಿ ದೊಡ್ಡಮಾಣಿ ಅವರ ಬಳಿ ಪಡೆದರು. ಕಳೆದ 7 ವರ್ಷಗಳಿಂದ ಅವರು ವೀಣಾವಾದಿನಿ ಸಂಗೀತ ವಿದ್ಯಾಪೀಠದ ಗುರು ನಮ್ಮವರೇ ಆದ ಶ್ರೀ ಯೋಗೀಶ ಶರ್ಮ ಬಳ್ಳಪದವು ಅವರಲ್ಲಿ ಸಂಗೀತ ಅಭ್ಯಸಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಷ್ಣು ಶರ್ಮ ಅವರು ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಗೂ ಉದಯೋನ್ಮುಖ ಗಾಯಕರಾದ ಹರೀಶ್ ಶಿವರಾಮಕೃಷ್ಣನ್, ಜಾಬ್ ಕುರಿಯನ್, ಬಿಜಿಬಾಲ್, ಬಿ.ಕೆ. ಹರಿನಾರಾಯಣ್, ಸುದೀಪ್ ಪಾಲನಾಡ್, ಇಂದುಲೇಖಾ ವಾರಿಯರ್, ಭದ್ರಾ ರೆಂಜಿ, ಶ್ರೀನಂದನ ಇವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದು ನಮ್ಮ ಸಮಾಜಕ್ಕೆ ಹೆಮ್ಮೆಯ ಕ್ಷಣ.
ನಮ್ಮ ಹೃದಯಪೂರ್ವಕ ಹಾರೈಕೆಗಳೊಂದಿಗೆ –
ವಿಷ್ಣು ಶರ್ಮನಿಗೆ ಯಶಸ್ವೀ ಗಾಯನಕ್ಕಾಗಿ ‘ಕರಾಡ ವಿಶ್ವ’ ಶುಭಾಶಯಗಳನ್ನು ಕೋರುತ್ತದೆ.
