Karada Vishwa

News · June 17, 2026

ಪುತ್ತೂರು ವಲಯದಲ್ಲಿ ಕರಾಡ ವಿಶ್ವ ಆ್ಯಪ್ ಪರಿಚಯ ಕಾರ್ಯಕ್ರಮ

- ಕರಾಡ ವಿಶ್ವ

2026ರ ಜೂನ್ 14ರಂದು ಕರಾಡ ವಿಶ್ವ ತಂಡವು ಕರಾಡ ಬ್ರಾಹ್ಮಣ ಸೇವಾ ಸಮಾಜ, ಪುತ್ತೂರು ವಲಯ (ನಿಡ್ಪಳ್ಳಿ) ಇದರ ಮುಖ್ಯ ಕಚೇರಿ ಬೀರ್ನೋಡಿಗೆ ಭೇಟಿ ನೀಡಿ, ಸಮಾಜ ಬಾಂಧವರೊಂದಿಗೆ ಸೌಹಾರ್ದಯುತ ಸಭೆ ನಡೆಸಿತು. ಈ ಸಂದರ್ಭದಲ್ಲಿ ಕರಾಡ ವಿಶ್ವ ಆ್ಯಪ್‌ನ ವೈಶಿಷ್ಟ್ಯಗಳು, ಉದ್ದೇಶಗಳು ಹಾಗೂ ಸಮಾಜದ ಸಂಘಟನೆ ಮತ್ತು ಸಂಪರ್ಕ ವೃದ್ಧಿಗೆ ಅದರ ಉಪಯುಕ್ತತೆಯನ್ನು ವಿಸ್ತೃತವಾಗಿ ಪರಿಚಯಿಸಲಾಯಿತು.

ಸಭೆಯಲ್ಲಿ  ವಲಯದ ಕರಾಡ ಬ್ರಾಹ್ಮಣ ಸೇವಾ ಪ್ರತಿಷ್ಠಾನ (ರಿ ) ಇದರ ಅಧ್ಯಕ್ಷರಾದ ಶ್ರೀ ಮಹಾದೇವ ಭಟ್ ಕೊಲ್ಯ, ಕರಾಡ ಬ್ರಾಹ್ಮಣ ಸೇವಾ ಸಂಘ (ರಿ) ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ಟ ಬೀರಮೂಲೆ, ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ಭಟ್ ಚಂದುಕೂಡ್ಲು ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್ಟ ಚಂದುಕೂಡ್ಲು, ಖಜಾಂಚಿಗಳಾದ ಶ್ರೀಮತಿ ಶಾಲಿನಿ ಮುರಳೀಧರ ಭೋಗಲ್ಕರ್ ಮರದಮೂಲೆ, ಸ್ಥಳ ದಾನ ನೀಡಿದ ದಿ। ಕೀಕಾನ ಗಣೇಶ ಭಟ್ ಮನೆಯವರು ಸೇರಿದಂತೆ ವಲಯದ ಅನೇಕ ಗಣ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಸಭೆಯ ನಂತರ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ಭಟ್ಟ ಅವರು ವಲಯದ ವತಿಯಿಂದ ನಿರ್ಮಾಣ ಹಂತದಲ್ಲಿರುವ ಹೊಸ ಸಭಾಭವನದ ಕುರಿತು ವಿವರವಾದ ಮಾಹಿತಿ ನೀಡಿದರು. ಸುಮಾರು 400 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸುವ ವಿಶಾಲ ಸಭಾಂಗಣ, ಸುಸಜ್ಜಿತ ವೇದಿಕೆ, ವೇದಿಕೆಯ ಹಿಂಭಾಗದಲ್ಲಿ ಎರಡು ಕೊಠಡಿಗಳು, ಶೌಚಾಲಯ ವ್ಯವಸ್ಥೆ ಹಾಗೂ ಆಧುನಿಕ ಅಡುಗೆಮನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಈ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.

ಸಮಾಜದ ಮುಂದಾಲೋಚನೆಯ ಯೋಜನೆಗಳು ಮತ್ತು ಸಂಘಟನಾ ಚಟುವಟಿಕೆಗಳ ಬಗ್ಗೆ ಮಾಹಿತಿ ವಿನಿಮಯಗೊಂಡ ಈ ಭೇಟಿ ಪರಸ್ಪರ ಆತ್ಮೀಯತೆ ಹಾಗೂ ಸಹಕಾರವನ್ನು ಇನ್ನಷ್ಟು ಬಲಪಡಿಸುವಲ್ಲಿ ಯಶಸ್ವಿಯಾಯಿತು.
Community