
News · November 13, 2026
ಪ್ರತಿಷ್ಠಿತ ‘ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪ್ರಶಸ್ತಿ’ಗೆ ಭಾಜನರಾದ ಪ್ರೊ. ಕೆ ಗಣಪತಿ ಭಟ್
ಶ್ರೀಯುತರಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು
ತಿರುಪತಿಯ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ ಗಣಪತಿ ಭಟ್ ಅವರು ವಾರಾಣಸಿಯ ಜಂಗಮವಾಡಿ ಮಠದ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ 'ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪ್ರಶಸ್ತಿ’ ಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಷಯ.
ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ವೈದಿಕ ಪರಂಪರೆ ಹಾಗೂ ಜ್ಞಾನಸಾಧನೆಯ ಮಹತ್ವವನ್ನು ಪ್ರತಿಬಿಂಬಿಸುವ ಈ ಗೌರವಕ್ಕೆ ಭಾಜನರಾಗಿರುವುದು ಅವರ ವಿದ್ವತ್ ಸಾಧನೆ ಮತ್ತು ಶೈಕ್ಷಣಿಕ ಸೇವೆಗೆ ಸಂದ ಮಹತ್ವದ ಮನ್ನಣೆಯಾಗಿದೆ.
ವಾರಾಣಸಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಸಿಂಹಾಸನದ ಜಂಗಮವಾಡಿ ಮಠದಲ್ಲಿ 2027ರ ಮಾರ್ಚ್ 5ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಜಗದ್ಗುರು ವಿಶ್ವಾರಾಧ್ಯ ಜಯಂತ್ಯುತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಈ ಗೌರವಕ್ಕೆ ಪಾತ್ರರಾಗಿರುವ ಪ್ರೊ. ಗಣಪತಿ ದೇವರ್ಯ ಅವರಿಗೆ ಕರಾಡ ವಿಶ್ವದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ಅವರ ಜ್ಞಾನಸೇವೆ ಹಾಗೂ ವಿದ್ವತ್ ಸಾಧನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುವ ಶಕ್ತಿಯಾಗಿ ಅವರ ಕಾರ್ಯ ಮುಂದುವರಿಯಲಿ ಎಂದು ಹಾರೈಸುತ್ತೇವೆ.

