Karada Vishwa

News · May 3, 2026

ಪ್ರೊ. ಕೆ. ಗಣಪತಿ ಭಟ್ ಅವರಿಗೆ ಅಭಿನಂದನೆಗಳು

ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ದರ್ಶನಶಾಸ್ತ್ರ ವಿಭಾಗದ ಡೀನ್ ಆಗಿ ನೇಮಕ.

ಪ್ರೊ. ಕೆ. ಗಣಪತಿ ಭಟ್ ಕೆಮ್ಮಣಬಳ್ಳಿ ಅವರು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ (National Sanskrit University, Tirupati) ದರ್ಶನಶಾಸ್ತ್ರ ವಿಭಾಗದ ಡೀನ್ (Dean, School of Darśanas) ಆಗಿ ನೇಮಕಗೊಂಡಿರುವುದು ನಮ್ಮ ಸಮುದಾಯಕ್ಕೆ ಅತ್ಯಂತ ಸಂತೋಷದ ಹಾಗೂ ಗೌರವದ ವಿಷಯವಾಗಿದೆ.

ಈ ಮಾನ್ಯತೆ ಅವರ ವೈದಿಕ ಜ್ಞಾನ, ಅಧ್ಯಯನ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಗೆ ದೊರೆತ ಉನ್ನತ ಗೌರವವಾಗಿದೆ. 

ಶ್ರೀಯುತ ಗಣಪತಿ ಭಟ್ ಅವರಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಮುಂದಿನ ದಿನಗಳಲ್ಲಿಅವರು ಇನ್ನಷ್ಟು ಮಹತ್ವದ ಕೊಡುಗೆಗಳನ್ನು ನೀಡಿ ಜ್ಞಾನ ಲೋಕವನ್ನು ಸಮೃದ್ಧಗೊಳಿಸಲಿ ಎಂದು ಹಾರೈಸುತ್ತೇವೆ.

Achievers
ಪ್ರೊ. ಕೆ. ಗಣಪತಿ ಭಟ್ ಅವರಿಗೆ ಅಭಿನಂದನೆಗಳು