Karada Vishwa

Article · August 31, 2026

ಚುಟುಕುಗಳು

By ರಾಧಾಕೃಷ್ಣಭಟ್-ಕುರುಮುಜ್ಜಿ

ರಾಧಾಕೃಷ್ಣ ಕುರುಮುಜ್ಜಿ

೧-ನಕಲಿ ಔಷಧಿ ಮಾರಾಟಜಾಲ ಪತ್ತೆ ವಾರ್ತೆಆಲಿಸಿ ಸೇವನೆಯ ದುಷ್ಪರಿಣಾಮದ ಕುರಿತು ಬರೆದ ಕವನ ೨ - ಕೃತಕ ವಸ್ತುಗಳಿಗಿಂತ ಶೃಂಗಾರಕ್ಕೆ ಪ್ರಾಕೃತಿಕ ವಸ್ತುಗಳೇ ಪ್ರಕೃತಿಯ ಕೊಡುಗೆಯಾಗಿ ಹೆಚ್ಚು ಸೂಕ್ತ ೩-ತಾಜಾ ಹಣ್ಣುಗಳು ಮಾರಾಟ ಪ್ರಚಾರಕ್ಕೆ ಮಾತ್ರ, ಒಳಗೆ ಹುಳಗಳ ಸಂಸಾರ

೧- ನಕಲಿಮದ್ದು


ನಕಲಿ ಮದ್ದಿನ ಅಂಗಡಿ ಗುಂಡನದ್ದು
ಅಮೃತ ಸಂಜೀವಿನಿ ಎನ್ನುವ ಹೆಸರಿನದ್ದು
ಕೆಲವರು ಸೇವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿ
ಹೋದರು ಕೆಲವರು ಇಹಲೋಕ ತ್ಯಜಿಸಿ


೨-ಶೃಂಗಾರಕ್ಕೆ


ಪ್ರಾಕೃತಿಕ ಶೃಂಗಾರ ವಸ್ತುಗಳೇ
ಶಾರೀರಿಕ ಶೃಂಗಾರಕ್ಕೆ ಸೂಕ್ತ
ಕೃತಕ ಶೃಂಗಾರ ವಸ್ತುಗಳಿಂದ
ಮನುಷ್ಯ ಆಗಬೇಕು ಮುಕ್ತ


೩-ತಾಜಾಹಣ್ಣು?


ತಾಜಾಹಣ್ಣುಗಳ ಮಾರಾಟ ಪ್ರಚಾರ
ಆಲಿಸಿ ತಂದೆ ಮಾಡಬಾರದೆಂದು ನಿಸ್ಸಾರ
ಕೊಯಿದಾಗ ಅದರೊಳಗೆ ಗೂಡಿನಾಕಾರ
ಅಲ್ಲಿ ಒಕ್ಕಲಾಗಿತ್ತು ಹುಳಗಳದ್ದೆ ಸಂಸಾರ


Creative Writings