Karada Vishwa

Event · July 12, 2025

ಕರಾಡ ವಿಶ್ವ ವೆಬಿನಾರ್ ಸರಣಿ -27

12/07/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ: "ಸಂಗೀತವೆಂಬ ಸಂಗಾತಿ" ; ಸಂಪನ್ಮೂಲ ವ್ಯಕ್ತಿ : ಗಾನಪ್ರವೀಣ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು

ಕರಾಡ ವಿಶ್ವ ವೆಬಿನಾರ್ ಸರಣಿ -27

ಈ ಸರಣಿ ಕಾರ್ಯಕ್ರಮದ ಅಂಗವಾಗಿ 12/07/2025ರ ಶನಿವಾರ ಸಂಜೆ 7.30ಕ್ಕೆ ಸಂಗೀತವೆಂಬ ಸಂಗಾತಿ ಎನ್ನುವ ವಿಶೇಷ ವಿಷಯದ ಕುರಿತು ಗಾನಪ್ರವೀಣ, ಸಂಗೀತ ಜ್ಯೋತಿಶ್ರೀ, ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಇವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮ ನಡೆಯುವ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/jwo-yvyb-etc
_______________________________________________________

ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

* ತಂದೆ ಬಳ್ಳಪದವು ಶ್ರೀ ರಾಧಾಕೃಷ್ಣ ಭಟ್ಟ, ತಾಯಿ ಶ್ರೀಮತಿ ಸತ್ಯವತಿ.

* ಪ್ರಾಥಮಿಕ ಸಂಗೀತಾಭ್ಯಾಸ ಬಳ್ಳಪದವು ಮಾಧವ ಉಪಾಧ್ಯಾಯ ಮತ್ತು ವಿ. ವಿಷ್ಣು ಭಟ್ ಅವರ ಗರಡಿಯಲ್ಲಿ.

* ಮೃದಂಗವನ್ನು ಎಂ.ವಿ.ನಾಯರ್ ಮತ್ತು ಕರ್ನಾಟಿಕ್ ಸಂಗೀತವನ್ನು ಕೆ. ವೆಂಕಟರಮಣನ್ ಅವರ ಶಿಷ್ಯರಾಗಿ ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಶಾಲೆಯಲ್ಲಿ ಕಲಿತರು. ಅದೇ ಕಾಲೇಜಿನಲ್ಲಿ ಗಾನಪ್ರವೀಣ ಪದವಿ ಪೂರೈಸಿ ಪ್ರಥಮ ಶ್ರೇಣಿ (First Rank) ಪಡೆದರು.

* ಶಾಸ್ತ್ರೀಯ ಸಂಗೀತವನ್ನು ಉಳಿಸಿ, ಬೆಳೆಸಿ, ಪಸರಿಸುವ ನಿಟ್ಟಿನಲ್ಲಿ 1999ರಲ್ಲಿ ಹುಟ್ಟೂರಿನಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಪೀಠ'ವನ್ನು ಸ್ಥಾಪಿಸಿದರು. ಅಲ್ಲಿನ ನಾರಾಯಣೀಯಂ ಸಂಗೀತ ಕ್ಯಾಂಪಸ್ ಸಂಗೀತಾಸಕ್ತರ ಅಚ್ಚುಮೆಚ್ಚಿನ ತಾಣ.

* ಇವರು ಸ್ಥಾಪಿಸಿದ ವೈದಿಕ-ತಾಂತ್ರಿಕ ವಿದ್ಯಾಪೀಠ'ದಲ್ಲಿ ವೇದ, ತಂತ್ರ, ಮಂತ್ರ, ಜ್ಯೋತಿಷ್ಯ, ಸಂಸ್ಕೃತ ವಿಭಾಗದಲ್ಲಿ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ.

* ಹಲವಾರು ಕಡೆಗಳಲ್ಲಿ ನಿಯಮಿತ ಸಂಗೀತ ತರಗತಿಗಳು, ದೇಶ ಮತ್ತು ಪ್ರಪಂಚದಾದ್ಯಂತ ಸಂಗೀತ ಕಾರ್ಯಕ್ರಮ ನೀಡಿದ/ನೀಡುತ್ತಿರುವ ಹೆಗ್ಗಳಿಕೆ ಶ್ರೀಯುತರದ್ದು.

* ಸ‌ಂಗೀತ ಜ್ಯೋತಿ ಶ್ರೀ ಪುರಸ್ಕಾರ, ಯಕ್ಷಧ್ರುವ ಕಲಾ ಗೌರವ, ರಂಗ ಚಿನ್ನಾರಿ ಪುರಸ್ಕಾರ, ಕಲಕ ಪ್ರಶಸ್ತಿ, ಕಂಚಿ ಕಾಮಕೋಟಿ ಆಸ್ಥಾನ ವಿದ್ವಾನ್ ಪುರಸ್ಕಾರ, ರಾಷ್ಟ್ರ ರಕ್ಷಾ ಸಂಚಲನ ಪ್ರತಿಭಾ ಪುರಸ್ಕಾರ, ಕೇರಳ ಸಂಗೀತ ನಾಟ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಮುಂತಾದ ಗೌರವಾದರಗಳಿಗೆ ಭಾಜನರಾಗಿದ್ದಾರೆ.

* ಸಂಗೀತವನ್ನೇ ಉಸಿರಾಗಿಸಿ ಆ ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

* ಶ್ರೀಯುತರಂತೆಯೇ ಅವರ ಅನೇಕ ಶಿಷ್ಯರೂ ಸಂಗೀತ ಕ್ಷೇತ್ರದಲ್ಲಿ ಹಲವಾರು ಸಂಗೀತ ಶ್ರೇಷ್ಠರನ್ನು ಸಮಾಜಕ್ಕೆ ಕೊಡುಗೆ ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

* ಮಿತಭಾಷಿ, ಹಸನ್ಮುಖಿ, ಸಹೃದಯಿ.

Webinar
ಕರಾಡ ವಿಶ್ವ ವೆಬಿನಾರ್ ಸರಣಿ -27