
Article · July 11, 2026
ಪರಶುರಾಮ
(ಐತಿಹಾಸಿಕ ನಿರೂಪಣಾ ಕವನ) -- ಶ್ರದ್ಧಾ ಭಟ್ ಕೆ ಎಸ್, ಚಂದುಕೂಡ್ಲು
ಭೂಲೋಕದ ಭರತಖಂಡದಿ
ಸಕಲಐಶ್ವರ್ಯದ ಆಗರ..
ತ್ರೇತಾ ಯುಗದಿ ಕ್ಷತ್ರೀಯರ ಹಾಹಾಕಾರ
ಮಾಡಲು ಇವರ ಸಂಹಾರ
ತಾಳಿದನು ಶ್ರೀ ಹರಿಯು ಅವತಾರ...
ಆಗಿ ರೇಣುಕಾ - ಜಮದಗ್ನಿಯರ ಕಿರಿಯ ಪುತ್ರ,
ಬ್ರಾಹ್ಮಣ ಜನನವಾದರೂ ಗುಣಗಳಿಲ್ಲಿ ಇವ ಕ್ಷಾತ್ರ,
ನೀರು ತರಲೆಂದು ತಾಯಿ ರೇಣುಕಾ ದೇವಿಯು ಹೊರಟಿದ್ದಳು,
ಗಂಧರ್ವರ ಜಾಲಕ್ರೀಡೆ ನೋಡಿ ವಿಕಾರವು ಮೂಡಿತು ಮನದೊಳು,
ಕುಟೀರಕ್ಕೆ ದೇವಿಯು ತೆರಳುವಾಗ ತಡವಾಗಿತ್ತು,
ಜಮದಗ್ನಿಗೆ ಇದರ ಕಾರಣವೂ ತಿಳಿದಿತ್ತು..
ಕೋಪದಿಂದ ಕರೆದನು ಪುತ್ರರನ್ನು ಕಡಿಯಲು ತಾಯಿಯ ಶಿರವನ್ನು,
ಮೊದಲಾದ ಅಗ್ರಜರು ಮರೆಯಲಿಲ್ಲ ತಾಯಿಯ ಮಮತೆಯನ್ನು..
ರಾಮ ಇರುವರಲ್ಲಿ ಕಿರಿಯವ,
ಪರಶಿವನಿಂದಲೇ ಪರಶುವನ್ನು ಸಿದ್ದಿಸಿಕೊಂಡವ..
ತಂದೆಯ ಮಾತಿಗೆ ಭೀತಿಯಿಲ್ಲದೆ ಕಡಿದ ತಾಯಿಯ ಶಿರವ,
ಮರಳಿ ಪಡೆದನು ಅವಳ ಕೇಳಿ ತಂದೆಗೆ ವರವ..
ಕಾಮನೆಗಳ ಮೀರಿ ಧರ್ಮವನ್ನು ಉಳಿಸಿದನು
ಇವನೇ ಪರಶುವನ್ನು ಹಿಡಿದ ಪರಶುರಾಮನು...
Creative Writings
