Article · June 22, 2026
ಹರಿನಾಮ
✍🏻ವೀಣಾ ಎಂ. ಭಟ್
ಸುಖದ ಸೋಪಾನವು ಹರಿನಾಮ ಸ್ಮರಣೆಯಲಿ
ದುಃಖವನು ನೀಗುವನು ತುಂಬು ಹೃದಯದಲಿ
ಶಿಲೆಯ ಕೆತ್ತಿದ ಶಿಲ್ಪಿ ತನ್ನ ಕೈ ಚಳಕದಲಿ
ಹೂವಾಗಿ ಅರಳಿಹುದು ಕಲ್ಲಲ್ಲಿ ಅಂದದಲಿ
ಕಲೆಯಲ್ಲಿ ಬಲೆಯಾಗಿ ಮಿನುಗಿತು ಭವದಲ್ಲಿ
ಚೆಲುವ ಚೆನ್ನಿಗರಾಯ ನೆಲೆಸಿರುವ ಗುಡಿಯಲ್ಲಿ
ಕಲ್ಲಿನಲಿ ಹೂವಾಗಿ ತಂತ್ರ ಮಂತ್ರದ ಜಪದಿ
ಜೀವಕಳೆ ತುಂಬುವರು ಮಂತ್ರದ ಪಠಣದಿ
ಫುಲ್ಲನಾಭನು ಅರಳಿ ನಿಂತ ಗುಡಿ ಗೋಪುರದಿ
ದರುಶನಕಾಗಿ ಬರುವರು ಸಾಗರದಂತೆ ಹರಿದು
ಮನಕೆ ಚೈತನ್ಯವ ಕೊಡುವನು ಮಹಾದೇವ
ನೀಡುವನು ಸ್ಮರಣೆಯಲಿ ಸಕಲ ಇಷ್ಟಾರ್ಥವ
ತನು ಮನಕೆ ಆನಂದ ದಿವ್ಯ ದರುಶನ ದೇವಾ
ಕೊಡು ಎಮಗೆ ನೆಮ್ಮದಿಯ ಸಕಲ ಸೌಭಾಗ್ಯವ
Creative Writings
