Karada Vishwa

Article · September 15, 2026

ಮುಕ್ತಕ

ಸಂಧ್ಯಾ ಕೊರೆಕ್ಕಾನ

ಹತ್ತಿರವೆ ಜತೆಗಿದ್ದು ಮರೆಮಾಚಿ ಬಚ್ಚಿಟ್ಟ

ಕತ್ತಿಯಿಂದಿರಿಯುವರು ಹಿಂಬದಿಗೆ ನಿಂತು

ಕತ್ತುಕೊಯ್ಯುತಲವರು ಹಿತಶತ್ರುವಾಗಿರಲು

ಅತ್ತುಕರೆಯುವೆ ಯಾರ ಬಾಳಸಂಧ್ಯೆ

Creative Writings