
News · July 1, 2025
ಶಶಿಕಲಾ ಬಾಯಾರು ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ – ನಮ್ಮ ಸಮುದಾಯದ ಹೆಮ್ಮೆ
ವಿದ್ವಾನ್ ಪೆರ್ಲ ಕೃಷ್ಣ ಭಟ್ಟರ ಪುತ್ರಿಯಾಗಿರುವ ಶಶಿಕಲಾ ಅವರು ಕಸೂತಿ ಕಲೆ, ವ್ಯಕ್ತಿಚಿತ್ರಗಳು, ಅಂಕಣಗಳು ಮತ್ತು ಕಥೆಗಳ ಮೂಲಕ ಕನ್ನಡ ಸಾಹಿತ್ಯ ಹಾಗೂ ಕಲೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ.
ಕರಾಡ ಸಮುದಾಯದ ಹೆಮ್ಮೆ, ಬಹುಮುಖಿ ಸಾಧಕಿ, ಕಸೂತಿ ಕಲಾವಿದೆ ಹಾಗೂ ಲೇಖಕಿ ಶಶಿಕಲಾ ಬಾಯಾರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು – ಕೇರಳ ಗಡಿನಾಡ ಘಟಕದಿಂದ ಆಯೋಜಿಸಲಾದ ‘ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಕಾರ್ಯಕ್ರಮದ ಅಂಗವಾಗಿ ಸಜಂಕಿಲದ ‘ಸ್ವಸ್ತಿಕ’ ನಿವಾಸದಲ್ಲಿ ಗೌರವಿಸಲಾಯಿತು.
ವಿದ್ವಾನ್ ಪೆರ್ಲ ಕೃಷ್ಣ ಭಟ್ಟರ ಪುತ್ರಿಯಾಗಿರುವ ಶಶಿಕಲಾ ಅವರು ಕಸೂತಿ ಕಲೆ, ವ್ಯಕ್ತಿಚಿತ್ರಗಳು, ಅಂಕಣಗಳು ಮತ್ತು ಕಥೆಗಳ ಮೂಲಕ ಕನ್ನಡ ಸಾಹಿತ್ಯ ಹಾಗೂ ಕಲೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರ 'ಪತ್ರಾರ್ಜಿತ' ಕೃತಿ ಮತ್ತು ಕಸೂತಿ ಚಿತ್ರಗಳು ವಿಶಿಷ್ಟವಾಗಿದ್ದು, ನಾಡಿನಾದ್ಯಂತ ಪ್ರದರ್ಶನಗೊಳ್ಳುವಷ್ಟರ ಮಟ್ಟಿಗೆ ಶ್ರೇಷ್ಠವೆಂದು ಗಣ್ಯರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಿ, ಶಶಿಕಲಾ ಅವರ ಸಾಧನೆಗೆ ಗೌರವ ಸಲ್ಲಿಸಿದರು.
ಕಣಿಪುರ ಪತ್ರಿಕೆಯ ವರದಿ : ಎಲೆಮರೆ ಕಾಯಿಯಂತಿರುವ ಬಹುಮುಖಿ ಸಾಧಕಿ, ಲೇಖಕಿ, ಕಸೂತಿ ಕಲಾವಿದೆ ಶಶಿಕಲಾ ಬಾಯಾರು ಅವರಿಗೆ ಕ. ಸಾ. ಪ ವತಿಯಿಂದ ಗೃಹ ಸನ್ಮಾನ
