
Article · April 30, 2026
ಏಳ್ಗೆಯಾಗಲಿ ಭಾರತ
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ವಿಶ್ವಮಾನ್ಯ ಮಹೋದಯನ ಕೈ
-ಗಳಲಿ ಮೆರೆದಿದೆ ಭಾರತಾ /
ಸಾಧನೆಯ ಹಾದಿಯಲಿ ಸಾಗುತ,
ವಿಶ್ವ ಮಾನ್ಯತೆ ಪಡೆಯುತಾ /
ಬಡತನದಿ ಬೆಳೆದೆದ್ದು ಬಂದವ
ಕಷ್ಟ ಸುಖಗಳನರಿತವ /
ಸಂವಿಧಾನದ ನೆರಳಲೇ ಸರಿ
-ಯಾದ ದಾರಿಯ ಹುಡುಕಿದಾ /
ಶತ್ರು ಸೈನ್ಯವ ಹೊಡೆದು ಓಡಿಸಿ
ಸಿಂಧೂರ ತಿಲಕವನಿರಿಸಿದಾ /
ಆಂತರಿಕ ಶತ್ರುಗಳ ಜುಟ್ಟನು
ಹಿಡಿದು ಮುಷ್ಠಿಯೊಳಿರಿಸಿದಾ /
ಶತ್ರು ಪಾಳಯದಲ್ಲಿ ಗಡ ಗಡ
ಗಡನೆ ನಡುಕವ ಹುಟ್ಟಿಸೀ /
ಸಿಡಿಲ ಮರಿಯಂತೆದ್ದು ಬಂದವ,
ಮಾತಿನಲೆ ಬಿಸಿ ಮುಟ್ಟಿಸೀ /
ಯೋಗ್ಯ ವ್ಯಕ್ತಿಯ ಕರಗಳಲ್ಲಿ
ಮೆರೆಯಲೀ ಈ ಭಾರತಾ/
ವಿಶ್ವ ಮಾನ್ಯತೆ ಪದೆದು ದೇಶವು
ಮೆರೆದು ಏಳ್ಗೆಯ ಕಾಣುತಾ /
☘️☘️☘️
Creative Writings
