Karada Vishwa

Event · September 8, 2026

ಕರಾಡ ವಿಶ್ವ ವೆಬಿನಾರ್ ಸರಣಿ -41

12/09/2026ರ ಶನಿವಾರ ಸಂಜೆ 7.30ಕ್ಕೆ. ವಿಷಯ : Jaw pain in the modern world (ಆಧುನಿಕ ಜಗತ್ತಿನಲ್ಲಿ ದವಡೆ ನೋವು) ಸಂಪನ್ಮೂಲ ವ್ಯಕ್ತಿ : ಡಾ. ಸೋನಿಯಾ ಭಟ್

ಈ ಸರಣಿ ಕಾರ್ಯಕ್ರಮದ ಅಂಗವಾಗಿ 12/09/2026ರ ಶನಿವಾರ ಸಂಜೆ 7.30ಕ್ಕೆ Jaw pain in the modern world (ಆಧುನಿಕ ಜಗತ್ತಿನಲ್ಲಿ ದವಡೆ ನೋವು) ಎನ್ನುವ ವಿಷಯದ ಕುರಿತು ಡಾ. ಸೋನಿಯಾ ಭಟ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/ykz-gpuu-tfj


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

★ ಕುಂಟಿಕಾನ ಶ್ರೀನಿವಾಸ ಭಟ್-ಸುಶೀಲಾ ಭಟ್ ದಂಪತಿಯ‌ ಪುತ್ರಿ.

★ ವಿದ್ಯಾರ್ಹತೆ - ಬಿಡಿಎಸ್: ಎಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು. ಎಂಡಿಎಸ್ (ಪ್ರೊಸ್ಟೋಡಾಂಟಿಕ್ಸ್): ಯೆನೆಪೋಯ ಡೆಂಟಲ್ ಕಾಲೇಜು, ಮಂಗಳೂರು.

★ ಫೆಲೋ (ಒರೊಫೇಶಿಯಲ್ ಪೈನ್ ಮತ್ತು ಸ್ಲೀಪ್ ಮೆಡಿಸಿನ್): ರೋಸ್‌ಮನ್ ವಿವಿ, ಅಮೆರಿಕಾ. 'ಟಿಎಂಜೆ ಅಸ್ವಸ್ಥತೆಗಳು ಮತ್ತು ಸ್ನಾಯು ನೋವು ಚಿಕಿತ್ಸೆ'ಯ ಕುರಿತು ಜೆಫ್ರಿ ಓಕೆಸನ್ ಅವರಿಂದ ಪ್ರಮಾಣಪತ್ರ ಕೋರ್ಸ್, ಅಮೆರಿಕಾ.

★ ವೃತ್ತಿ ಅನುಭವ - ಹಿರಿಯ ಉಪನ್ಯಾಸಕಿ: ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಂಗಳೂರು. ರೀಡರ್: ರಿಷಿರಾಜ್ ಡೆಂಟಲ್ ಕಾಲೇಜು, ಭೋಪಾಲ್. ತಜ್ಞ ಪ್ರೊಸ್ಟೊಡಾಂಟಿಸ್ಟ್: ನ್ಯೂ ಅಲ್ ಸಲಾಮ್ ಆರ್ಥೊಡಾಂಟಿಕ್ & ಡೆಂಟಲ್ ಸೆಂಟರ್, ಅಲ್ ಐನ್, ಅಬುಧಾಬಿ.

★ ಸದ್ಯ ಪ್ರಿವಿಲೇಜ್ ಡೆಂಟಲ್ ಇಂಪ್ಲಾಂಟಾಲಜಿ ಅಬುಧಾಬಿ ಇಲ್ಲಿ ವೃತ್ತಿನಿರತರು.

★ ತನ್ನ‌ ಕ್ಷೇತ್ರದಲ್ಲಿ ಹತ್ತಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮತ್ತು ಪ್ರಕಟಣೆಗಳನ್ನು ಮಂಡಿಸಿದ ಕೀರ್ತಿ ಇವರದ್ದು.

★ ಪ್ರಮುಖ ಉಪನ್ಯಾಸಗಳು - 2006-2018: ಭಾರತ ಮತ್ತು ಯುಎಇಯಲ್ಲಿ ಪ್ರೊಸ್ಟೊಡಾಂಟಿಕ್ಸ್ ವಿಷಯಗಳ ಕುರಿತು ಉಪನ್ಯಾಸ. 2018-2026: ಯುಎಇ ಮತ್ತು ಭಾರತದಲ್ಲಿ ಒರೊಫೇಶಿಯಲ್ ನೋವಿನ ಕುರಿತು ವಿವಿಧ ವೇದಿಕೆಗಳಲ್ಲಿ ಆಹ್ವಾನಿತ ಭಾಷಣ. 2020-2024: ಯೆನೆಪೋಯ, ಕೆಎಲ್ಇ, ಮತ್ತು ಎ ಬಿ ಶೆಟ್ಟಿ ಡೆಂಟಲ್ ಕಾಲೇಜುಗಳಲ್ಲಿ ಸ್ಲೀಪ್ ಅಪ್ನಿಯಾ ಹಾಗೂ ಒರೊಫೇಶಿಯಲ್ ನೋವಿನ ಕುರಿತು ಭಾಷಣ. 2024-2025: ಶಾರ್ಜಾ, ಅಬುಧಾಬಿ, ಮತ್ತು ದುಬೈನಲ್ಲಿ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಒರೊಫೇಶಿಯಲ್ ನೋವಿನ ನಿರ್ವಹಣೆ ಕುರಿತು ಭಾಷಣ. 2025-2026: 'ಎ ವಿಂಡೋ ಟು ದಿ ವರ್ಲ್ಡ್ ಆಫ್ ಒರೊಫೇಶಿಯಲ್ ಪೈನ್' ಮತ್ತು & ಲೆಟ್ಸ್ ಟಾಕ್ ಪೈನ್' ವೆಬಿನಾರ್ ಸರಣಿಗಳಲ್ಲಿ ಟಿಎಂಡಿ, ಬ್ರಕ್ಸಿಸಮ್, ದವಡೆ ನೋವು, ಧ್ಯಾನ ಹಾಗೂ ಸಿಬಿಟಿ (CBT) ಕುರಿತು ಉಪನ್ಯಾಸ.

★ ಇಂಡಿಯನ್ ಪ್ರೊಸ್ಟೋಡಾಂಟಿಕ್ ಸೊಸೈಟಿ ಮತ್ತು. ಐಎಎಸ್ಪಿ (IASP) ಗ್ಲೋಬಲ್ ಅಡ್ವೊಕಸಿ ಗ್ರೂಪ್ ಸದಸ್ಯೆ.

★ ಪತಿ ಮಕ್ಕಳೊಂದಿಗೆ ಅಬುಧಾಬಿಯಲ್ಲಿ ವಾಸ.

ಕರಾಡ ವಿಶ್ವ ವೆಬಿನಾರ್ ಸರಣಿ -41