Karada Vishwa

News · October 8, 2026

ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ – ಕರಾಡ ವಿಶ್ವದ ಖಂಡನೆ

ಈ ದುಷ್ಕೃತ್ಯವನ್ನು ಕರಾಡ ವಿಶ್ವ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಸಮುದಾಯದ ಹೆಮ್ಮೆಯ ಸದಸ್ಯರಾದ ಡಾ. ಪ್ರದೀಪ್ ಅವರೊಂದಿಗೆ ಕರಾಡ ವಿಶ್ವ ಸಂಪೂರ್ಣವಾಗಿ ನಿಂತಿದ್ದು, ಅವರಿಗೆ ನಮ್ಮ ಸಂಪೂರ್ಣ ಬೆಂಬಲ, ಸಹಕಾರ ಮತ್ತು ಒಗ್ಗಟ್ಟಿನ ಭರವಸೆಯನ್ನು ವ್ಯಕ್ತಪಡಿಸುತ್ತದೆ.

ಬೆಳ್ತಂಗಡಿ ತಾಲೂಕು ನಾವೂರಿನ ಸ್ವಾತಿ ಕಟ್ಟಡದಲ್ಲಿರುವ ಕರಾಡ ಸಮುದಾಯದವರಾದ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಮಂಗಳವಾರ ತಡರಾತ್ರಿ ಬೆಂಕಿ ತಗುಲಿ, ಕ್ಲಿನಿಕ್‌ನ ಮೂರು ಕೊಠಡಿಗಳಿಗೆ ಹಾಗೂ ಬೆಡ್‌ಗಳು, ಔಷಧಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಾವೂರಿನಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಸುಮಾರು 1000ಕ್ಕೂ ಅಧಿಕ ಮಂದಿ ಒಗ್ಗೂಡಿ ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಶಾಂತಿಯುತವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಬಳಿಕ ಶಾಂತಿಯುತ ಪ್ರತಿಭಟನಾ ಮೆರವಣಿಗೆಯೂ ನಡೆಯಲಿದೆ. ಸತ್ಯ ಹೊರಬಂದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.

ಈ ದುಷ್ಕೃತ್ಯವನ್ನು ಕರಾಡ ವಿಶ್ವ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಸಮುದಾಯದ ಹೆಮ್ಮೆಯ ಸದಸ್ಯರಾದ ಡಾ. ಪ್ರದೀಪ್ ಅವರೊಂದಿಗೆ ಕರಾಡ ವಿಶ್ವ ಸಂಪೂರ್ಣವಾಗಿ ನಿಂತಿದ್ದು, ಅವರಿಗೆ ನಮ್ಮ ಸಂಪೂರ್ಣ ಬೆಂಬಲ, ಸಹಕಾರ ಮತ್ತು ಒಗ್ಗಟ್ಟಿನ ಭರವಸೆಯನ್ನು ವ್ಯಕ್ತಪಡಿಸುತ್ತದೆ.

ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರಾಡ ವಿಶ್ವ ಆಗ್ರಹಿಸುತ್ತದೆ.

Community
ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ – ಕರಾಡ ವಿಶ್ವದ ಖಂಡನೆ