Karada Vishwa

News · May 6, 2026

ದ್ರವಿಣಾ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಯುಎಸ್ ಏರ್ ಫೋರ್ಸ್ ನಲ್ಲಿ ಗ್ರ್ಯಾಜುಯೇಷನ್

ನಿಡ್ಪಳ್ಳಿ ಮುಂಡೂರು  ಮೂಲದ ಸೂರ್ಯನಾರಾಯಣ ಭಟ್ ಮತ್ತು ಸಜಂಕಿಲ ಪದ್ಮಶ್ರೀ ಭಟ್ ದಂಪತಿಯ ಪುತ್ರಿ

ದ್ರವಿಣಾ  ಭಟ್ (ವಯಸ್ಸು 18) ಅವರು  6ನೇ ತರಗತಿಯವರೆಗೆ ಶಿಕ್ಷಣವನ್ನು ಬೆಂಗಳೂರಿನ ಕುಮರನ್ಸ್ ಸ್ಕೂಲ್ ನಲ್ಲಿ ಪೂರ್ಣಗೊಳಿಸಿ, ನಂತರ ಅಮೇರಿಕಾದ ಟೆನ್ನೆಸ್ಸಿಯ ನ್ಯಾಶ್ವಿಲ್‌ನ ಮಾರ್ಟಿನ್ ಲೂಥರ್ ಕಿಂಗ್ ಹೈ ಸ್ಕೂಲ್‌ನಲ್ಲಿ 7ನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.

ಇದಾದ ನಂತರ ಅವರು ಯುಎಸ್ ಏರ್ ಫೋರ್ಸ್ ಸೇರಿ ತಮ್ಮ ಶೈಕ್ಷಣಿಕ ಪಯಣವನ್ನು ಮುಂದುವರಿಸಿ, ಗ್ರ್ಯಾಜುಯೇಷನ್  ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಅತ್ಯಂತ ಪ್ರಶಂಸನೀಯವಾಗಿದೆ.

ದ್ರವಿಣಾ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು! 
ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ದೇಶ-ವಿದೇಶಗಳಲ್ಲಿ ಹೆಮ್ಮೆ ತರುವಂತಾಗಲಿ ಎಂದು ಹಾರೈಸುತ್ತೇವೆ.

ಕರಾಡ ವಿಶ್ವ




AchieversEducation
ದ್ರವಿಣಾ ಭಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!