Karada Vishwa

Event · April 6, 2026

ಕರಾಡ ವಿಶ್ವ ವೆಬಿನಾರ್ ಸರಣಿ -36

11/04/2026ರ ಶನಿವಾರ ಸಂಜೆ 7.30ಕ್ಕೆ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 11/04/2026ರ ಶನಿವಾರ ಸಂಜೆ 7.30ಕ್ಕೆ ಡಿಜಿಟಲ್ ಡಿಟಾಕ್ಸ್ ಮತ್ತು  ಕಾರ್ಬನ್ ಕಡಿತದಿಂದ ಪ್ರಕೃತಿಯ ಜೊತೆ ಸಮತೋಲನ ಹಾಗೂ ಸ್ಥಿರ ಜೀವನದ ಮಾರ್ಗ ಎನ್ನುವ ಅಪರೂಪದ ವಿಷಯದ ಕುರಿತು ಶ್ರೀಯುತ ಡಾ. ವೇಣುಗೋಪಾಲ  ಭಟ್, ಕನಿಯಾಲ ಜಾಲು ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ  off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/ykz-gpuu-tfj

ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ 05-12-1986ರಂದು ಮಣಿಪಾಲದಲ್ಲಿ ಜನನ. ತಂದೆ: ದಿ. ಸುಬ್ರಹ್ಮಣ್ಯ ಭಟ್ (ಕನಿಯಾಲ ಜಾಲು), ತಾಯಿ: ಲಕ್ಷ್ಮೀ ಎಸ್ ಭಟ್ (ಅಗುಂಬೆ).
★ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಬ್ಬಳ್ಳಿಯಲ್ಲಿ.
★ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ.
★ ಪುಣೆಯ ಸಿಂಬಿಯೋಸಿಸ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ.
★ ವಿದ್ಯಾರ್ಥಿ ಜೀವನದಲ್ಲಿ RSS ಮತ್ತು ABVP ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
★ ABVPಯ ಹುಬ್ಬಳ್ಳಿ- ಧಾರವಾಡ ಮಹಾನಗರದ ಕಾರ್ಯದರ್ಶಿ ಹಾಗೂ ರಾಜ್ಯ ಸಹ ಕಾರ್ಯದರ್ಶಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
★ ಟಿಸಿಎಸ್, ಕ್ಯಾಟರ್‌ಪಿಲ್ಲರ್ ಹಾಗೂ ಶೆಲ್ ಆಯಿಲ್ ಆಂಡ್ ಗ್ಯಾಸ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 18+ ವರ್ಷಗಳ ವೃತ್ತಿ ಅನುಭವ.
★ 40ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ ಸಪ್ಲೈ ಚೈನ್ ಡಿಜಿಟಲೀಕರಣ, Carbon Emissions & Sustainability ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
★ 'ಡಿಕಾರ್ಬನೈಸಿಂಗ್ ಸಪ್ಲೈ ಚೈನ್ ಮತ್ತು ನೆಟ್ ಜೀರೋ ಕಾರ್ಬನ್ ಗುರಿಗಳು' ವಿಷಯದಲ್ಲಿ ಸಂಸ್ಥೆಯ ಅವಶ್ಯಕತೆಯ ಭಾಗವಾಗಿ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ  ಇತ್ತೀಚಿಗೆ ಸ್ವಿಸ್ ಸ್ಕೂಲ್ ಆಫ್ ಬಿಸಿನೆಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದಿದ್ದಾರೆ.
★ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಪ್ಲೈ ಚೈನ್ ಮತ್ತು ಸಸ್ಟೇನೆಬಿಲಿಟಿ ಸಮಾವೇಶಗಳಲ್ಲಿ ಸಕ್ರಿಯ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಪ್ಯಾನೆಲಿಸ್ಟ್ ಆಗಿ ಭಾಗವಹಿಸುತ್ತಿದ್ದಾರೆ.
★ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು(IIMB) ಸೇರಿದಂತೆ ವಿಪ್ರೋ, ಸಿಮೆನ್ಸ್ ಮತ್ತು ಇಕೀ ಎನರ್ಜಿ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಹ್ವಾನಿತ ವಕ್ತಾರ.
★ ಕರಾಡ ಬ್ರಾಹ್ಮಣ ಸಮಾಜ, ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
★ ಸ್ಥಿರ ಜೀವನಶೈಲಿ, ಕಾರ್ಬನ್ ಕಡಿತ ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ ಕುರಿತು ವಿಶೇಷ ಆಸಕ್ತಿ.
★ ಜಾಗೃತಿ ಕಾರ್ಯಕ್ರಮಗಳು, ಉಪನ್ಯಾಸಗಳು, ಮಾರ್ಗದರ್ಶನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸುತ್ತಿದ್ದಾರೆ.
★ ಅಮ್ಮ, ಮಡದಿ, ಮಗಳು, ಮಗನೊಂದಿಗೆ ಬೆಂಗಳೂರು ನಿವಾಸಿ.
★ ಕ್ರೀಡಾಸಕ್ತ, ಹಸನ್ಮುಖಿ, ನಿಗರ್ವಿ.


Webinar
ಕರಾಡ ವಿಶ್ವ ವೆಬಿನಾರ್ ಸರಣಿ -36