
Article · September 7, 2026
ಅಮ್ಮಾ ಹೇಳೆ..
By ಜಯಶ್ರೀ ಕೆ. ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಅಮ್ಮಾ ನೋಡು ಬಾನಿನಲ್ಲಿ
ಇರುಳು ನಗುವ ಚಂದಮಾಮ
ಹಗಲು ಹೊತ್ತಿನಲ್ಲಿ ಅವನು
ಎಲ್ಲಿ ಹೋಗುವ?/
ತಂಪು ಬೆಳಕು ನೀಡುತಾನೆ.
ಮೋಡದೊಳಗೆ ಅಡಗುತಾನೆ,
ಬೆಳದಿಂಗಳ ಹರಡುತಾನೆ
'ದೀಪವೇನವಾ?
ಮೊದಲು ಮೊದಲು ಚಿಕ್ಕವನೂ
ದಿನವ ಕಳೆಯೇ ದೊಡ್ಡವನೂ,
ಹುಣ್ಣಿಮೆಯಾ ದಿನಕೆ
ಅವನು ಹಿರಿಯನಾಗುವಾ !
ಹೇಳೆ ಅಮ್ಮ ಹೀಗೆ ಏಕೆ?
ಹಗಲಿನಲ್ಲಿ ಕಾಣನೇಕೆ?
ಬಾನಿನಲ್ಲಿ ತೇಲಿ ತೇಲಿ
ಎಲ್ಲಿ ಹೋಗುವ ?
ಕೈಯಲವನ ಹಿಡಿಯಬಹುದೆ ?
ಭೂಮಿಗವನ ತರಲುಬಹುದೆ. ?
ಅವನ ಜೊತೆಗೆ ಆಡಬಹುದೆ?
ನಿಜವ ಹೇಳಮ್ಮಾ /
ನನ್ನ ಜೊತೆಗೆ ನಡೆಯುತಾನೆ,
ನಾನು ನಿಲ್ಲಲು ನಿಲ್ಲುತಾನೆ,
ಗೆಳೆಯನೇನು ಅವನು ನನಗೆ ?
ಎಂದು ಬರುವವ ?
Creative Writings
