
Article · March 9, 2026
ಕೇಳುಕಂದಾ.....(ಅಮ್ಮ ಹೇಳಿದ್ದು)
- ಜಯಶ್ರೀ ಕೆ.ಆರ್.ಭಟ್. ಪಳ್ಳತಡ್ಕ
☘️☘️☘️☘️☘️
ಆಡು ಕಂದ, ಓಡು ಕಂದ
ಓದಬೇಕು ಚಂದ
ನಾಡು, ನುಡಿಯ ಗೌರವಿಸುತ
ಬಾಳಬೇಕು ಚಂದ
'ರಾಷ್ಟ್ರ ಗೀತೆ ಹಾಡಬೇಕು
ಭಕ್ತಿ ಶ್ರದ್ಧೆಯಿಂದ
ಗೆಳೆಯರೊಡನೆ ಬೆರೆಯಬೇಕು
ತುಂಬು ಒಲವಿನಿಂದ
ಗುರುಗಳನ್ನು ನಮಿಸುವುದು
ಗೌರವ ಸಂಬಂಧ
ಜೀವನವೇ ಪಾವನವು
ಕಲಿತ ವಿದ್ಯೆಯಿಂದ
ಎಲ್ಲರೊಡನೆ ಬೆರೆತು ಬಾಳ-
-ಲದುವೆ ಸ್ನೇಹ ಬಂಧ
ಅರಿವು ಬರಲಿ ಬದುಕು ಕಲಿಸು-
-ವಂಥ ಪಾಠದಿಂದ
☘️☘️☘️☘️
Creative Writings
