
Article · June 7, 2026
ದೇವಿ (ಭಕ್ತಿಗೀತೆ )
- ಸಂಧ್ಯಾ ಕೊರೆಕ್ಕಾನ
ದಧ್ಯನ್ಯ ಪ್ರಿಯಳಿವಳು ಶ್ರೀಮಾತೆ ಜಗದಂಬೆ
ಹೃದ್ಯ ರೂಪಿಣಿ ದೇವಿ ಕ್ರೋಧಾಂಕುಶೇ
ಉದ್ಯದ್ಸಹಸ್ರರವಿ ಪ್ರಭೆಯಂತೆ ಶೋಭಿಸುವ
ವಿದ್ಯಾ ಸ್ವರೂಪಿಣಿಯು ಲಲಿತಾಂಬಿಕೆ
ವಿಶ್ವ ಮಾತೆಯು ನೀನೆ ನಾದರೂಪಿಣಿ ನೀನೆ
ಅಶ್ವವೇರಿದ ತಾಯಿ ಚಂದ್ರಮಂಡಲಳು
ವಿಶ್ವಕಾರಿಣಿಯವಳು ವೇದ ಜನನಿಯು ಇವಳೆ
ವಿಶ್ವಗ್ರಾಸಳು ಮಾತೆ ಜಗದಂಬಿಕೆ
ನಾಮ ಜಪ ಶ್ರೇಷ್ಠವದು ಒಲಿಯುವಳು ಮುದದಿಂದ
ಕೋಮಲಾಂಗಿಯು ಬಂದು ಹರಸುವಳು ನಮ್ಮ
ಕಾಮಸೇವಿತೆ ದಯಾಮೂರ್ತಿ ರಸಶೇವಧಿಯು
ಸಾಮಗಾನವು ಪ್ರಿಯವು ಸುಗುಣಾಂಬಿಕೆ
Creative Writings
