Karada Vishwa

Article · March 22, 2026

ಅಡಿಕೆಗೆ ಔಷಧಿ ಸಿಂಪಡಣೆಗೆ ರೋಬೋಟ್.. ಕೊಟ್ಟಂಗುಳಿ ಶ್ರೀಧರ ಭಟ್ ಅವರ ಆವಿಷ್ಕಾರ

- ರವೀ ಸಜಂಗದ್ದೆ

ಶ್ರೀಧರ ಭಟ್ ಅವರ ಕಿರುಪರಿಚಯ 

ಶ್ರೀಧರ ಭಟ್ ಅವರು ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿನ ಕೊಟ್ಟಂಗುಳಿ ಮೂಲದವರು. ಅವರು ಶ್ರೀಕೃಷ್ಣ ಮತ್ತು ರಾಧಾ ದಂಪತಿಯ ಪುತ್ರರಾಗಿದ್ದಾರೆ. ಅವರ ಧರ್ಮಪತ್ನಿ ರತ್ನಮಾಲ ಅವರು ಆಟಿಕುಕ್ಕೆ ಮಾಧವ ಮಾಸ್ಟರ್ ಮತ್ತು ಸುಮತಿ ದಂಪತಿಯ ಪುತ್ರಿಯಾಗಿದ್ದಾರೆ. ಶ್ರೀಧರ ಭಟ್ ಅವರು 1992ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದು, ಸುಳ್ಯದ ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಮುಂಬೈಯಲ್ಲಿ L&T Energy Hydrocarbon ಸಂಸ್ಥೆಯಲ್ಲಿ T&I Head (India Projects) ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಪ್ರಮುಖ ಕಂಪನಿಗಳಾದ Reliance, Essar ಹಾಗೂ Tata Power ಸಂಸ್ಥೆಗಳಲ್ಲಿ ಕೆಲಸ ಮಾಡಿದ ವಿಶಾಲ ಅನುಭವವನ್ನು ಹೊಂದಿದ್ದಾರೆ.


ಶ್ರೀಧರ ಭಟ್ ಆವಿಷ್ಕರಿಸಿದ  ರೋಬೋಟ್ ಯಂತ್ರದಿಂದ ಅಡಿಕೆಗೆ ಔಷಧಿ ಸಿಂಪಡಣೆ ಬಲು ಸುಲಭ!

ಸುಪಾರಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಅಡಿಕೆಯು ಕರ್ನಾಟಕ, ಕೇರಳ, ಅಸ್ಸಾಂ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯುವ ಒಂದು ಪ್ರಮುಖ ವಾಣಿಜ್ಯ ಬೆಳೆ. ಮರದ ಅತಿ ಎತ್ತರದ ಕಾರಣದಿಂದಾಗಿ, ಕೊಯ್ಲು ಮತ್ತು ಕೀಟ ನಿಯಂತ್ರಣದಂತಹ ಕಾರ್ಯಗಳು ಕಷ್ಟಕರ. ಮರಗಳನ್ನು ಏರುವ ನುರಿತರನ್ನು ಅಥವಾ ಇತರ ಹೊಸ ವಿಧಾನಗಳನ್ನು ಬಳಸುವ ಕೌಶಲ್ಯಪೂರ್ಣ ಕಾರ್ಮಿಕರನ್ನು ಅವಲಂಬಿಸಬೇಕಾದ ಪರಿಸ್ಥಿತಿ. ಈ ನಡುವೆ ಕೌಶಲ್ಯಪೂರ್ಣ ಕಾರ್ಮಿಕರ ಕೊರತೆಯು ಸ್ವಯಂಚಾಲಿತ ಪರಿಹಾರಗಳ ಅಭಿವೃದ್ಧಿಗೆ ಕಾರಣವಾಗಿವೆ. ಕೃಷಿಕರ ಈ ಸವಾಲುಗಳನ್ನು ಎದುರಿಸಲು, ಅಡಿಕೆ ಕೀಟನಾಶಕ ಸಿಂಪಡಿಸುವ ಯಂತ್ರದಂತಹ ನವೀನ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ನಡುವಿನ ಬಂಧುವೊಬ್ಬರು ತಂತ್ರಜ್ಞಾನ ಆಧಾರಿತ ಹೊಸ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವು ರೈತರು ಮರವನ್ನು ಭೌತಿಕವಾಗಿ ಹತ್ತದೆ ರಾಸಾಯನಿಕಗಳನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಅನುವು ಮಾಡಿಕೊಡುತ್ತದೆ, ಇದು ಸುರಕ್ಷತೆ, ದಕ್ಷತೆ ಮತ್ತು ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸಲಿದೆ.

ಯಂತ್ರ ವಿನ್ಯಾಸ ಮತ್ತು ಕಾರ್ಯಾಚರಣೆ


ಇದು ಯಾವುದೇ ಎತ್ತರದ ಅಡಿಕೆ ಮರಗಳಿಗೆ ಕೀಟನಾಶಕಗಳನ್ನು ಅಥವಾ ಶಿಲೀಂಧ್ರನಾಶಕಗಳನ್ನು  ಸಿಂಪಡಿಸಲು ವಿನ್ಯಾಸಗೊಳಿಸಲಾದ ವಿಶೇಷ ಕೃಷಿ ಸಾಧನವಾಗಿದೆ. ಈ ಯಂತ್ರವನ್ನು ಮರದ ಕಾಂಡದ ಮೇಲೆ ಜೋಡಿಸಲಾಗುತ್ತದೆ ಮತ್ತು ಕಾಂಡದ ವ್ಯಾಸವು ಬದಲಾಗುತ್ತಿದ್ದರೂ ಸಹ, ದೃಢವಾದ ಹಿಡಿತವನ್ನು ಕಾಯ್ದುಕೊಳ್ಳುವ ಕಾರ್ಯವಿಧಾನವನ್ನು ಬಳಸಿಕೊಂಡು ಮೇಲಕ್ಕೆ ಏರುತ್ತದೆ. ಇದು ಪುನರ್ಭರ್ತಿ ಮಾಡಬಹುದಾದ ಬ್ಯಾಟರಿ-ಚಾಲಿತ ಮೋಟಾರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಆಪರೇಟರ್ ವೈಫೈ-ಸಂಪರ್ಕಿತ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಬಹುದು. 

ಯೂಸರ್ ಇಂಟರ್ಫೇಸ್ (UI): ನಿಖರವಾದ ನಿಯಂತ್ರಣವನ್ನು ಸಾಧಿಸುವಲ್ಲಿ ಈ ಕೆಳಗಿನ ರೀತಿಯಲ್ಲಿ ಕಾರ್ಯನಿರ್ವಹಣೆಗೆ ಸಹಕರಿಸುತ್ತದೆ:
* ಕ್ಲೈಂಬಿಂಗ್: ಆರೋಹಣ ಮತ್ತು ಅವರೋಹಣಕ್ಕಾಗಿ ಆಜ್ಞೆಗಳು.
* ನಳಿಕೆಯ ನಿರ್ದೇಶನ: ಪರದೆಯ ಮೇಲೆ ನಿರ್ದಿಷ್ಟ ಮರ ಅಥವಾ ಗೊಂಚಲನ್ನು ಸ್ಪರ್ಶಿಸುವ ಮೂಲಕ ಮತ್ತು ಮೇಲೆ, ಕೆಳಗೆ, ಬಲ ಮತ್ತು ಎಡ ಸ್ಥಾನೀಕರಣಕ್ಕಾಗಿ ಸೂಕ್ಷ್ಮ ಹೊಂದಾಣಿಕೆಗಳನ್ನು ಮಾಡುವ ಮೂಲಕ.
* ಸ್ಪ್ರೇ ಕಾರ್ಯ: ಕೀಟನಾಶಕ ಹರಿವನ್ನು ಪ್ರಾರಂಭಿಸುವುದು ಮತ್ತು ನಿಲ್ಲಿಸುವುದು.
ಯಂತ್ರವನ್ನು ಮರಕ್ಕೆ ಜೋಡಿಸಲು ಸರಿಸುಮಾರು 15 ರಿಂದ 20 ಸೆಕೆಂಡುಗಳು ಮಾತ್ರ ಸಾಕು! ಅದಕ್ಕಾಗಿ ಕೆಳಗಿನ ಮಾರ್ಗಸೂಚಿಗಳನ್ನು ಅಳವಡಿಸಬೇಕು.
1. ನಿಯೋಜನೆ: ಯಂತ್ರವನ್ನು ಅದರ ತೆರೆದ-ಬದಿಯ ಚೌಕಟ್ಟಿನ ಮೂಲಕ ಮರಕ್ಕೆ ಜೋಡಿಸಲಾಗುತ್ತದೆ.
2. ಭದ್ರತೆ: ಯಂತ್ರವನ್ನು ಮರಕ್ಕೆ ಬಿಗಿಯಾಗಿ ಭದ್ರಪಡಿಸಲು ಸ್ಪ್ರಿಂಗ್ ಆರ್ಮ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.
3. ಜೋಡಣೆ: ನೋಜಲ್‌ ಚಲಿಸುವ  ಟ್ರ್ಯಾಕ್‌ನ ಮುಚ್ಚುವ ಉಂಗುರವನ್ನು ಜೋಡಿಸಲಾಗುತ್ತದೆ, ನಂತರ ಕೀಟನಾಶಕ ಸಾಗಿಸುವ ಪೈಪ್ ಅನ್ನು ಜೋಡಿಸಲಾಗುತ್ತದೆ.

ಕಾರ್ಯಾಚರಣಾ ವಿಧಾನ


ಯಂತ್ರವನ್ನು ಮರಕ್ಕೆ‌ ಜೋಡಿಸಿದ ನಂತರ, ಎಲ್ಲಾ ಕಾರ್ಯಾಚರಣೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಿರ್ವಹಿಸಲಾಗುತ್ತದೆ. "UP" ಗುಂಡಿಯನ್ನು ಒತ್ತುವ ಮೂಲಕ, ಮೈಕ್ರೋಕಂಟ್ರೋಲರ್ ಆರೋಹಣವನ್ನು ಪ್ರಾರಂಭಿಸಲು ಮೋಟಾರ್‌ಗಳನ್ನು ಪ್ರಚೋದಿಸುತ್ತದೆ.. ಯಂತ್ರವನ್ನು ಎಷ್ಟೇ ಎತ್ತರದ ಮರಕ್ಕೂ ಏರಿಸಬಹುದು, ಯಾವುದೇ ಎತ್ತರವನ್ನು ತಲುಪಬಹುದು ಮತ್ತು ಅದರ ಹಿಡಿತವು, ಯಂತ್ರವು ಮರದ ತುದಿಗೆ ತಲುಪಿಸಿ ನಿಲ್ಲಿಸಿದ ನಂತರ ಸಂಪೂರ್ಣವಾಗಿ ಸ್ಥಿರವಾಗಿರುವಲ್ಲಿ ಸಹಕರಿಸುತ್ತದೆ.

ಯಂತ್ರದಲ್ಲಿ ಅಳವಡಿಸಲಾದ ವೀಡಿಯೊ ಕ್ಯಾಮೆರಾವು ಮೊಬೈಲ್ UIಗೆ ನೇರ ಪ್ರಸಾರವನ್ನು ಒದಗಿಸುತ್ತದೆ. ಇದು ಆಪರೇಟರ್‌ಗೆ ನೈಜ ಸಮಯದಲ್ಲಿ ಸುತ್ತಲಿನ ಮರಗಳ‌/ಪರಿಸರದ  ವೀಕ್ಷಣೆಗೆ   ಅನುವು ಮಾಡಿಕೊಡುತ್ತದೆ. ಪರದೆಯ ಮೇಲೆ ನಿರ್ದಿಷ್ಟ ಮರ ಅಥವಾ ಗೊಂಚಲನ್ನು ಸ್ಪರ್ಶಿಸುವ ಮೂಲಕ, ನಳಿಗೆಯನ್ನು ಆ ಗುರಿಗೆ  ಸರಿಯಾಗಿ ತಿರುಗಿಸುವಲ್ಲಿ ಮೈಕ್ರೋ ಕಂಟ್ರೋಲರ್‌ಗೆ ಆಜ್ಞೆಯನ್ನು ಕಳುಹಿಸುತ್ತದೆ.  ನಳಿಗೆಯು ಗೊಂಚಲಿಗೆ ಗುರಿಯಿಟ್ಟ ನಂತರ ಆಪರೇಟರ್ ಸಿಂಪಡಿಸುವಿಕೆಯನ್ನು ಪ್ರಾರಂಭಿಸಲು UI ಮೂಲಕ ಪಂಪ್ ಅನ್ನು ಸಕ್ರಿಯಗೊಳಿಸಬೇಕು. ಗೊಂಚಲಿನ ಒಟ್ಟು ವ್ಯಾಪ್ತಿಯನ್ನು ಕವರ್ ಮಾಡಲು ವೀಡಿಯೊ ಫೀಡ್ ಅಥವಾ ಮೃದು ಗುಂಡಿಗಳನ್ನು (ಮೇಲಕ್ಕೆ/ಕೆಳಗೆ/ಎಡಕ್ಕೆ/ಬಲಕ್ಕೆ) ಸ್ಪರ್ಶಿಸುವ ಮೂಲಕ ನಳಿಕೆಯ ಚಲನೆಗಳನ್ನು ಸರಿಹೊಂದಿಸಬಹುದು. ಒಂದು ಗೊಂಚಲನ್ನು ಸಂಸ್ಕರಿಸಿದ ನಂತರ, ಆಪರೇಟರ್ ಪರದೆಯ ಮೇಲೆ ಮುಂದಿನ ಗುರಿಯನ್ನು  ಆಯ್ಕೆ ಮಾಡಬಹುದು. ಯಂತ್ರವು ಕೆಳಗಿಳಿಯುವ ಮೊದಲು ಏರಿದ ಮರ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಮರಗಳನ್ನು 360 ಡಿಗ್ರಿ ವ್ಯಾಪ್ತಿಯಲ್ಲಿ ಸಿಂಪಡಣೆ ನಡೆಸಬಹುದು. ಎತ್ತರ ಕಡಿಮೆ ಇರುವ ಅಥವಾ ಚಿಕ್ಕ ಮರಗಳಿಗೆ ಸಿಂಪಡಣೆ ನಡೆಸಲು ಕ್ಲೈಂಬರ್ ಅನ್ನು ಆ ಮರಗಳ ಎತ್ತರಕ್ಕೆ ಸರಿ ಹೊಂದುವಂತೆ ನಿಲ್ಲಿಸಿ ಸಿಂಪಡಣೆ ನಡೆಸಬಹುದು..

ಈ ಯಂತ್ರದ ವಿಶೇಷತೆಗಳು:


1. ಹಗುರ: ಇಬ್ಬರು ಕೌಶಲ್ಯರಹಿತ ಕೆಲಸಗಾರರೂ ಸುಲಭವಾಗಿ ಹೊತ್ತೊಯ್ಯಬಹುದಾದಷ್ಟು ಹಗುರ ಸಾಧನ. 
2. ತ್ವರಿತ ನಿಯೋಜನೆ: ತ್ವರಿತವಾಗಿ ಮರಕ್ಕೆ ಜೋಡಿಸಬಹುದಾಗಿದೆ/ಕಳಚಬಹುದಾಗಿದೆ.
3. ಸುಸ್ಥಿರ ಶಕ್ತಿ: ಸಂಪೂರ್ಣವಾಗಿ ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ.
4. ರಿಮೋಟ್ ಸುರಕ್ಷತೆ: ದೂರದಿಂದಲೇ ಸಿಂಪಡಣೆ ಮಾಡಬಹುದು, ಇದರಿಂದ  ಕೀಟನಾಶಕವು ಮೈಗೆ ತಾಕಲಾರದು.
5. ಬಳಕೆದಾರ ಸ್ನೇಹಿ: ಯಾವುದೇ ವೈಫೈ-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸಬಹುದು. ಮೊಬೈಲ್‌ ಬಳಸಲು ತಿಳಿದಿರುವ ಯಾವುದೇ ವ್ಯಕ್ತಿಯೂ ಸುಲಭವಾಗಿ ಓಪರೇಟ್ ಮಾಡಬಹುದು...
6. ಸಿಂಪಡಣೆ ನಡೆಸುವಾಗ ನಿರಂತರವಾಗಿ ಮೇಲೆ ನೋಡುವ ಅಗತ್ಯವಿಲ್ಲ.. ಮೊಬೈಲ್ ಪರದೆಯ ಮೇಲೆ ವೀಡಿಯೋ ನೋಡಿ ಯಂತ್ರದ ಕಾರ್ಯನಿರ್ವಹಣೆ.

ಅಡಿಕೆಗೆ ಕೀಟನಾಶಕಗಳು ಸಿಂಪಡಿಸುವ‌ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು  ಹೊರಹೊಮ್ಮಿದ್ದರೂ, ಈ ನಿರ್ದಿಷ್ಟ ಪರಿಹಾರವು ವಿಶೇಷವಾಗಿ ಭರವಸೆಯನ್ನು ಹೊಮ್ಮಿಸಿದೆ. ಹಗುರವಾದ ವಿನ್ಯಾಸ, ಯಾರಿಗೂ ಬಳಸಬಹುದಾದ ಯಂತ್ರ, ಇದು ಅಡಿಕೆ ಕೃಷಿಯಲ್ಲಿನ ಕಾರ್ಮಿಕ ಬಿಕ್ಕಟ್ಟನ್ನು ಪರಿಹರಿಸಬಹುದು. ಇದೊಂದು ಗೇಮ್ ಚೇಂಜರ್ ಆವಿಷ್ಕಾರವಾಗಿದ್ದು ಅಡಿಕೆ ಮರ ಹತ್ತಿ ಔಷಧಿ ಸಿಂಪಡಣೆ ಮಾಡುವ ಕ್ಲಿಷ್ಟ ಕೆಲಸವನ್ನು ಸುಲಭಗೊಳಿಸಲಿದೆ. ಇಂಥಾ ಯಂತ್ರೋಪಕರಣಗಳಿಗೆ ಹೆಚ್ಚಿನ ಪ್ರಚಾರ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಕೃಷಿಕರು ಇದನ್ನು ಸುಲಭವಾಗಿ ಬಳಸುವಂತಾಗಿ ಇದರ ಸದುಪಯೋಗವಾಗುವಂತೆ ಮಾಡುವ ಕರ್ತವ್ಯ ಮತ್ತು ಜವಾಬ್ದಾರಿ ನಮ್ಮೆಲ್ಲರದ್ದು. 'ಕೃಷಿತೋ ನಾಸ್ತಿ ದುರ್ಭಿಕ್ಷಂ' ಎನ್ನುವ ಸುಭಾಷಿತ ಸಾರ್ವಕಾಲಿಕ.
ಈ ಯಂತ್ರೋಪಕರಣದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀಧರ ಭಟ್ ಕೊಟ್ಟಂಗುಳಿ 
ಮೊಬೈಲ್ ಸಂಖ್ಯೆ 7718910319
(ಸಮಯ: ಸಂಜೆ 7ರಿಂದ 9)


Arecanut  Tree-Climbing Robot & Pesticide Sprayer 

Overview
Arecanut (Areca catechu), commonly known as supari, is a vital commercial plantation crop widely cultivated in regions like Karnataka, Kerala, Assam and parts of Maharashtra. The trees grow tall and slender, often reaching heights of 15–20 meters (50–70 feet). Due to this extreme height, routine agricultural tasks—such as harvesting and pest control—are difficult and hazardous. Traditionally, these tasks rely on skilled labourers who manually climb the trees or other new methods, requires skilled labour. However, an increasing shortage of skilled climbers/applicators and the inherent safety risks have driven the development of mechanical and automated solutions.
To address these challenges, innovative devices have been developed. These machines allow farmers to effectively apply chemicals without physically climbing the tree, significantly improving safety, efficiency, and productivity.

Unlike other models, this sprayer is remarkably light and easy to use, making it a superior choice in its category
The system is powered by a rechargeable battery-operated motors. Once it reaches the desired height near the top of tree, the climbing mechanism pauses to begin the application.
Spraying System & Control
Attached to the climber is a spraying unit featuring a versatile nozzle assembly. This nozzle can rotate 360 degrees both horizontally and vertically, allowing it to treat not only the host tree but also surrounding trees.
The operator manages the entire process via a WiFi-connected mobile app. The user interface (UI) allows for precise control over:
Climbing: Commands for ascending and descending.
Nozzle Direction: . By touching a specific tree or bunch on the screen and micro  adjustments for UP, DOWN, RIGHT, and LEFT positioning.
Spray Function: Starting and stopping the pesticide flow.
Mounting Process
Installation is quick and takes approximately 15 to 20 seconds:
1. Placement: The machine is placed around the trunk through its open-side frame.
2. Securing: A spring arm is activated to tightly secure the machine to the trunk.
3. Assembly: The closing ring of the nozzle assembly track is attached, followed by the pesticide conveying pipe.
Operating Procedure
Once secured, all operations are managed via the mobile app. By pressing the "UP" button, the microcontroller triggers the motors to begin the ascent. The climber can reach any height and remains perfectly stable once stopped due to its gripping tension.
A video camera on the nozzle assembly provides a live stream to the mobile UI as soon as the devices are connected. This allows the operator to see the canopy in real-time. By touching a specific tree or bunch on the screen, the operator sends a command to the microcontroller to align the nozzle with that target.
Once aligned, the operator activates the pump via the UI to begin spraying. Micro-Nozzle movements  can be adjusted by touching the video feed OR soft buttons (UP/DOWN/LEFT/RIGHT) to ensure total coverage of the bunch. After one bunch is treated, the operator simply selects the next target on the screen. The machine can treat all surrounding trees in a 360-degree range, including the host tree, before descending. The climber can also be stopped at lower levels to treat shorter trees.
Key Features
1. Lightweight: Easily handled by two unskilled workers and simple to transport within the plantation.
2. Rapid Deployment: Quick attachment and detachment save time.
3. Sustainable Power: Operates entirely on rechargeable batteries.
4. Remote Safety: Remote operation eliminates the farmer's exposure to hazardous pesticides.
5. User-Friendly: Can be controlled from any WiFi-enabled smartphone.

While several innovations have emerged in this field, this specific solution is particularly promising. Its combination of a lightweight design, ease of use by anyone, and intuitive mobile interface makes it accessible to anyone familiar with a smartphone, addressing the crisis in arecanut farming.



AgricultureAchievers
ಅಡಿಕೆಗೆ ಔಷಧಿ ಸಿಂಪಡಣೆಗೆ ರೋಬೋಟ್.. ಕೊಟ್ಟಂಗುಳಿ ಶ್ರೀಧರ ಭಟ್ ಅವರ ಆವಿಷ್ಕಾರ