
Article · July 19, 2026
ಸಣ್ಣವ..
--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಚಿಣ್ಣರ ಬಳಗದಿ ಸಣ್ಣವನಿದ್ದನು
ಬಣ್ಣದ ಉಡುಪನು ತೊಟ್ಟವನೂ
ನುಣ್ಣಗೆ ತಲೆಯೂ ಗುಂಡಗೆ ಕೆನ್ನೆ
ಕೆಂಪಗೆ ತುಟಿಗಳು ಉಳ್ಳವನೂ
ಆಟವನಾಡುತ ಉರುಳಿಸುತಿದ್ದನು
ಬಣ್ಣದ ಬಣ್ಣದ ಗೋಲಿಗಳಾ
ಸುಂದರ ಮನಸೂ ಬಣ್ಣದ ಕನಸೂ
ತುಂಬು ನಿರೀಕ್ಷೆಯು ನಾಳೆಗಳಾ
ಕಣ್ಣುಗಳಗಲಿಸಿ ನೋಡುತಲಿದ್ದನು
ಸುತ್ತಮುತ್ತಲಿನ ದೃಶ್ಯಗಳಾ
ಮನಸಿನ ಪುಟಗಳು ತುಂಬುತಲಿತ್ತೂ
ಅಚ್ಚಳಿಯದ ಹಲ ವಿಷಯಗಳಾ
Creative Writings
