
News · August 26, 2026
ಬೆಂಗಳೂರಿನಲ್ಲಿ ಋಗುಪಾಕರ್ಮ
- ಹೆಬ್ಬಾಳ, ನಾಗರಬಾವಿ ಹಾಗೂ ಬನಶಂಕರಿ ವಲಯಗಳು.
ಬೆಂಗಳೂರಿನಲ್ಲಿ ಒಟ್ಟು ಮೂರು ಕಡೆ ಕರಾಡ ಬ್ರಾಹ್ಮಣ ಸಮಾಜದ ಸಾಮೂಹಿಕ ಋಗುಪಾಕರ್ಮಕ್ಕೆ ತಯಾರಿ ಮಾಡಲಾಯ್ತು.
೧. ದೈತೋಟ/ಉಪ್ಪಂಗಳದಲ್ಲಿ ಉಪಾಕರ್ಮ
ದೈತೋಟ/ಉಪ್ಪಂಗಳ (ಹೆಬ್ಬಾಳ ವಿಭಾಗ)ದಲ್ಲಿ ಇಂದು ಉಪಾಕರ್ಮ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಸುಮಾರು ೨೦ ಮಂದಿ ಸಮಾಜ ಬಾಂಧವರು ಭಾಗವಹಿಸಿ, ಉಪಾಕರ್ಮದ ಧಾರ್ಮಿಕ ಮಹತ್ವವನ್ನು ಸ್ಮರಿಸುತ್ತಾ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಸಮಾಜದ ಬಾಂಧವರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.



೨. ಬನಶಂಕರಿ ೬ನೇ ಹಂತದಲ್ಲಿ ಉಪಾಕರ್ಮ
ಬೆಂಗಳೂರು ಬನಶಂಕರಿ ೬ನೇ ಹಂತದಲ್ಲಿರುವ ಶ್ರೀ ಮಹೇಶ್ ಭಟ್ ಹೊಸಮಾಧವ ಅವರ ಮನೆಯಲ್ಲಿ ಇಂದು ಉಪಾಕರ್ಮ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಸುಮಾರು ೨೫ ಮಂದಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಕೃಷ್ಣಪ್ರಸಾದ್ ಅವರ ನೇತೃತ್ವದಲ್ಲಿ ಉಪಾಕರ್ಮದ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದ ಬಳಿಕ ಭಾಗವಹಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ತಮ್ಮ ಮನೆಯಲ್ಲಿ ಸ್ಥಳಾವಕಾಶ ಕಲ್ಪಿಸಿ, ಉಪಹಾರದ ವ್ಯವಸ್ಥೆಯನ್ನೂ ಮಾಡಿಕೊಟ್ಟ ಶ್ರೀ ಮಹೇಶ್ ಭಟ್ ಹೊಸಮಾಧವ ಹಾಗೂ ಅವರ ಕುಟುಂಬದವರಿಗೆ ಹೃತ್ಪೂರ್ವಕ ಧನ್ಯವಾದಗಳು. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲ ಸಮಾಜ ಬಾಂಧವರಿಗೂ ಕೃತಜ್ಞತೆಗಳು.
ಮುಂದಿನ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಂದಾಗಿ ಸೇರಿ, ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಯಶಸ್ವಿಯಾಗಿ ನಡೆಸೋಣ. ನಮ್ಮ ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಸಂಘಟನೆ ಎಂಬ ಸಂಕಲ್ಪದೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ.
- - ಯುವ ಕರಾಡ ಬಳಗ
ಬನಶಂಕರಿ ವಲಯ, ಬೆಂಗಳೂರು

೩ . ನಾಗರಭಾವಿಯಲ್ಲಿ ಋಗುಪಾಕರ್ಮ
ಬೆಂಗಳೂರಿನ ನಾಗರಭಾವಿಯಲ್ಲಿ ಇಂದು, ೨೬ ಆಗಸ್ಟ್ ೨೦೨೬ ರಂದು ಉಪಾಕರ್ಮ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಶ್ರೀ ಗಣಪತಿ ಭಟ್ ಕನಿಯಾಲ ಜಾಲು ಅವರ ಮನೆಯಲ್ಲಿ ಬೆಳಿಗ್ಗೆ 6:15ಕ್ಕೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಸುಮಾರು 3೦ ಮಂದಿ ಕರಾಡ ಬಂಧುಗಳು ಭಾಗವಹಿಸಿ, ಉಪಾಕರ್ಮದ ಧಾರ್ಮಿಕ ವಿಧಿವಿಧಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಎಲ್ಲರ ಸಹಕಾರ ಹಾಗೂ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಅತ್ಯಂತ ಸುಸೂತ್ರವಾಗಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು.




