
News · July 12, 2026
ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ಸ್ವೀಕರಿಸಿದ ಕೋಟೆ ರಾಮ ಭಟ್
ಅಭಿನಂದನೆಗಳು...
ಕರಾಡ ಸಮಾಜದ ಹಿರಿಯ ತಾಳಮದ್ದಲೆ ಅರ್ಥಧಾರಿ ಶ್ರೀ ಕೋಟೆ ರಾಮ ಭಟ್, ಕಾರ್ಕಳ ಹಾಗೂ ಶ್ರೀ ವೆಂಕಟರಾಮ ಭಟ್ಟ, ಸುಳ್ಯ, ಡಾ. ಜಿ. ಕೆ. ಹೆಗಡೆ, ಹೊನ್ನಾವರ, ಅವರಿಗೆ ಯಕ್ಷಗಾನ ಕ್ಷೇತ್ರದ ಗಣ್ಯ ಸಂಸ್ಥೆಯಾದ ಯಕ್ಷಗಾನ ಕಲಾರಂಗ ನೀಡುವ ಪ್ರತಿಷ್ಠಿತ “ಯಕ್ಷಗಾನ ಕಲಾರಂಗ ಪ್ರಶಸ್ತಿ” ಪ್ರದಾನಗೊಂಡಿದೆ. ಪಂಡಿತ ಪೆರ್ಲ ಕೃಷ್ಣ ಭಟ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಶಸ್ತಿಯು ರೂ. 20,000 ನಗದು ಬಹುಮಾನವನ್ನು ಒಳಗೊಂಡಿದೆ.
ಉಡುಪಿ ಐವೈಸಿ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಪ್ರಶಸ್ತಿ ಪ್ರದಾನಕ್ಕೂ ಮುನ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಶ್ರೀರಂಗ ತುಲಾಭಾರ” ತಾಳಮದ್ದಲೆ ಯಶಸ್ವಿಯಾಗಿ ಪ್ರಸ್ತುತಗೊಂಡಿತು.
