Karada Vishwa

Event · November 7, 2025

ಕರಾಡ ವಿಶ್ವ ವೆಬಿನಾರ್ ಸರಣಿ -31

08/11/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ : ವೃತ್ತಿಯಲ್ಲಿ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ; ಸಂಪನ್ಮೂಲ ವ್ಯಕ್ತಿ : ಪ್ರೊಫೆಸರ್ ಮಂಜುನಾಥ ಘಾಟೆ

ಕರಾಡ ವಿಶ್ವ ವೆಬಿನಾರ್ ಸರಣಿ -31 ಕಾರ್ಯಕ್ರಮದ ಅಂಗವಾಗಿ 08/11/2025ರ ಶನಿವಾರ ಸಂಜೆ 7.30ಕ್ಕೆ ವೃತ್ತಿಯಲ್ಲಿ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳು ಎನ್ನುವ ಟ್ರೆಂಡಿಂಗ್ ವಿಷಯದ ಕುರಿತು ಪ್ರೊಫೆಸರ್ ಮಂಜುನಾಥ ಘಾಟೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ  off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/jwo-yvyb-etc


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ ಘಾಟೆ ಮಾಧವ ಭಟ್ - ಸರಸ್ವತಿ ದಂಪತಿಯ ಪುತ್ರ. 
★ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆ ದೂಮಕಡದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ನವೋದಯ ಹೈಸ್ಕೂಲ್ ಬೆಟ್ಟಂಪಾಡಿಯಲ್ಲಿ ಪಡೆದರು. ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ PUC ಪೂರ್ಣಗೊಳಿಸಿದರು.
★ ನಿಟ್ಟೆ ಕಾಲೇಜಿನಲ್ಲಿ ಫಾರ್ಮಸಿ ಪದವಿ (B.Pharm) ಮತ್ತು ಸ್ನಾತಕೋತ್ತರ ಫಾರ್ಮಸಿ ಪದವಿ (M.Pharm) ಪೂರ್ಣಗೊಳಿಸಿದರು.
★ 2003ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ಡಾಕ್ಟರೇಟ್ ಪೂರ್ಣಗೊಳಿಸಿದರು.
★ 2003ರಿಂದ 2006ವರೆಗೆ ತೈವಾನದ ನ್ಯಾಷನಲ್ ಡಾಂಗ್ ಹ್ವಾ ವಿಶ್ವವಿದ್ಯಾಲಯ & ದಕ್ಷಿಣ ಕೊರಿಯಾದ ಚಾಂಗ್ವಾನ್ ನ್ಯಾಷನಲ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಸಂಶೋಧನೆ ನಡೆಸಿ ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ.
★ DST, SERB, ಇಂಡೋ–ಬಲ್ಗೇರಿಯನ್ ಸಂಯುಕ್ತ ಸಂಶೋಧನಾ ಯೋಜನೆ, GUJCOST, DST–FIST ಮುಂತಾದ ಖ್ಯಾತ ಸಂಸ್ಥೆಗಳ ಸಹಾಯದಿಂದ 4 ಪ್ರಮುಖ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
★ ಫಾರ್ಮಸ್ಯೂಟಿಕಲ್ ಸೈನ್ಸ್ & ಸಂಶೋಧನಾ ಕ್ಷೇತ್ರದಲ್ಲಿ 27+ ವರ್ಷಗಳ ಅನುಭವ. ಹೊಸ ಅಣುಗಳ ವಿನ್ಯಾಸ & ಸಂಶ್ಲೇಷಣೆ, ಸಂಯೋಜಿತ ಸಂಶ್ಲೇಷಣಾ ವಿಧಾನಗಳು, ಸ್ಪೆಕ್ಟ್ರೋಸ್ಕೋಪಿಕ್ ತಂತ್ರಗಳು & ಫಾರೆನ್ಸಿಕ್ ರಸಾಯನ ಶಾಸ್ತ್ರದಲ್ಲಿ ತಜ್ಞರು. 2018ರಿಂದ 2020ರವರೆಗೆ ಚೀನಾದ ಚೋಂಗ್ಕಿಂಗ್‌ನ ಸೌತ್‌ವೇಸ್ಟ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ.
★ 2010 & 2018ರಲ್ಲಿ ರಾಜನಿಕಿಭಾಯಿ ಫೌಂಡೇಶನ್ ನೀಡಿದ Best M.Pharm Thesis ಪ್ರಶಸ್ತಿ, 2018ರಲ್ಲಿ Association of Pharmaceutical Teachers of India ನೀಡಿದ Best Principal of the Year ಪ್ರಶಸ್ತಿ, 2020ರಲ್ಲಿ Indian Society for Chemists and Biologists ನೀಡಿದ Best Teacher Award in Drug Discovery Category ಶ್ರೀಯುತರಿಗೆ ದೊರೆತ ಪ್ರಮುಖ ಗೌರವಗಳು.
★ ಅವರ ಸಂಶೋಧನಾ ಸಾಧನೆಗಳು ಗಮನಾರ್ಹವಾಗಿದ್ದು, ಅವರು ರಚಿಸಿದ 101 ಸಂಶೋಧನಾ ಲೇಖನಗಳು Scopus ಸೂಚ್ಯಂಕದಲ್ಲಿರುವ ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಅವರ H-index 25 ಆಗಿದ್ದು, 2,346ಕ್ಕೂ ಹೆಚ್ಚು ಉಲ್ಲೇಖಗಳು (citations) ದೊರೆತಿವೆ. ಅನೇಕ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ಆಹ್ವಾನಿತ ಉಪನ್ಯಾಸಗಳನ್ನು ನೀಡಿದ್ದಾರೆ. 
★ ಒಂದು ಭಾರತೀಯ ಪೇಟೆಂಟ್ ಹೊಂದಿದ್ದಾರೆ.
★ ಪ್ರಸ್ತುತ ರಾಷ್ಟ್ರೀಯ ಫಾರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ (NFSU), ಧಾರವಾಡ ಕ್ಯಾಂಪಸ್‌ನ ಕ್ಯಾಂಪಸ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Webinar
ಕರಾಡ ವಿಶ್ವ ವೆಬಿನಾರ್ ಸರಣಿ -31