
Article · August 30, 2026
ಲೋಕನಾಯಕ
ವೀಣಾ ಎಂ ಭಟ್
ಸತ್ಯವಂತರಿಗೆ ಇದು ಶುಭ ಕಾಲವಲ್ಲ
ಮಿಥ್ಯೆಯ ಹಾದಿಯಲಿ ಸಾಗುವ ಕಲಿ ಕಾಲ
ನ್ಯಾಯ ಅನ್ಯಾಯವ ಅರಿಯದ ಮೂಢರೆಲ್ಲ
ಮೂಗಿನ ನೇರಕ್ಕೆ ಮಾತು ಒಯ್ಯುವರಲ್ಲ
ಕಣ್ಣಿದ್ದು ಕುರುಡಾಗಿ ನಟಿಸುವ ಜನರೆಲ್ಲ
ಸ್ವಜನ ಪಕ್ಷಪಾತವೇ ತುಂಬಿದೆ ಜಗವೆಲ್ಲ
ರಾಮರಾಜ್ಯದ ಹೊಂಗನಸು ಈ ರಾಜನದು
ಗದ್ದುಗೆ ತ್ಯಜಿಸಲು ಹಾತೊರೆವ ಮನ ವೈರಿಗಳದು
ಒಳಸಂಚಿನಲಿ ಮೈಮರೆವ ನವನವೀನ ಬಣ
ಕಾಮಿತಾರ್ಥವ ಸಾಧಿಸಲು ವಾಮದಾರಿಯ ಗಡಣ
ಮಾತಿಲ್ಲ ಮೌನರಾಗದಲಿ ವೈರಿಗಳ ಸದೆಬಡಿದು
ದೇಶಕಾಗಿ ಹಗಲಿರುಳು ದುಡಿಯುವ ಜೀವವಿದು
ಒಳಹೊರಗೆ ಸುತ್ತ ವೈರಿಗಳು ಹಂಗಾಮದಲಿ
ನಿದಿರೆ ದೂರಕೆ ತಳ್ಳಿ ದೇಶವನು ಕಾಯುವನಿಲ್ಲಿ
ಜಿರಲೆಗಳ ಕಾಟವದು ದೇಶ ದ್ರೋಹವ ಬಗೆದು
ಮೋದಿಯ ಇಳಿಸುವ ತಂತ್ರದ ಕೂಟವಿದು
ಭಂಗ ತರುವ ಸೂತ್ರದಲಿ ರಾಜಧಾನಿಯ ಸುತ್ತ
ಸಂಗಮವು ಜಿರಲೆಗಳ ತಂತ್ರವನು ಹೆಣೆಯುತ್ತ
ಶ್ರೀರಾಮನ ಕೃಪೆ ಇಹುದು ಭಾರತದ ರಕ್ಷಣೆಗೆ
ಟೊಂಕ ಕಟ್ಟಿಹರು ಮೋದಿ ಈ ದೇಶದ ಭದ್ರತೆಗೆ
ಕರ ಮುಗಿದು ಬೇಡುವ ಮೋದಿಗಾಗಿ ಈಶನಲಿ
ಆಯುರಾರೋಗ್ಯವನು ದೇವ ಎಂದೆಂದು ನೀಡಲಿ
Creative Writings
