
News · March 2, 2026
ಅಭಿಲಾಷ ಪರಾಡ್ಕರ್ ಅವರಿಗೆ ಚಿನ್ನದ ಪದಕ
ಕರಾಡ ವಿಶ್ವದ ಅಭಿನಂದನೆಗಳು
ಫೆಬ್ರವರಿ 27ರಂದು ಗುಜರಾತ್‌ನ ಗಾಂಧಿನಗರದಲ್ಲಿರುವ NFSU ಕಾಲೇಜಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ, ಮಹಾನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಂದ ಗೌರವಿಸಲ್ಪಟ್ಟ ಕೇಮಾರು ಶಾಂತಿಸೋಮ ಪರಾಡ್ಕರ್ ಮತ್ತು ವಂದನಾ ದಂಪತಿಗಳ ಪುತ್ರಿ ಅಭಿಲಾಷ ಪರಾಡ್ಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
MA in Police and Security Studies ವಿಭಾಗದಲ್ಲಿ, ಹುಡುಗಿಯರ ವಿಭಾಗದಲ್ಲಿಯೂ ಹಾಗೂ ಸಾಮಾನ್ಯ ವಿಭಾಗದಲ್ಲಿಯೂ ತರಗತಿಯ ಶ್ರೇಷ್ಠ ವಿದ್ಯಾರ್ಥಿನಿ (ಟಾಪರ್) ಆಗಿ ಚಿನ್ನದ ಪದಕ ಪಡೆದು ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ನಿಮ್ಮ ಪರಿಶ್ರಮ, ಶ್ರದ್ಧೆ ಮತ್ತು ಬದ್ಧತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗಿದೆ. ನಿಮ್ಮ ಭವಿಷ್ಯವು ಇನ್ನಷ್ಟು ಯಶಸ್ಸು, ಕೀರ್ತಿ ಮತ್ತು ಸೇವೆಯಿಂದ ಕಂಗೊಳಿಸಲಿ ಎಂಬ ಹಾರೈಕೆಗಳು.
Women
