
Article · July 4, 2026
ಕಾಗೆ ಇಲ್ಲದಿರೆ ಹೇಗೆ?
--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ.
ಕಪ್ಪಗೆ ಬಣ್ಣಾ ದುಂಡಗೆ ಕಣ್ಣಾ ಒರಟಿನ ಧ್ವನಿಯಾ ಕಾಗೇ ...
ಪರಿಸರಕೇ ಇದು ಜಾಡಮಾಲಿಯೂ
ಇಲ್ಲದಿರೆ ಇದು ಹೇಗೆ?
ಉಳಿವುದೆ ಪಕೃತಿ ಅಳಿಸದೆ ಪ್ರಗತಿ? ಎಲ್ಲೆಲ್ಲೂ ಕೊಳೆ ತುಂಬೀ...
ಬಳಗದ ಜೊತೆಗೇ ಕೊಳೆಯನು ಕಳೆಯುವ ಕಾಗೆಯೂ ಒಳಿತೇ ನಂಬೀ
ನಿನ್ನೆಯ ಅನ್ನ, ಮೊನ್ನೆಯ ರೊಟ್ಟಿ, ಸತ್ತಿಹ ಪ್ರಾಣಿಯ ಮಾಂಸಾ..
ಏನೇ ಇರಲಿ ತಿಂದೇ ಬಿಡುವುದು ಆಯಿತು ಪರಿಸರ ಸ್ವಚ್ಛ ...
ಪ್ರತಿದಿನ ಮನೆಯಾ ಅಂಗಳದಲ್ಲಿ ಕಾಣಿಸುತಿತ್ತೂ ಕಾಗೇ...
ಈಗೇನಿದ್ದರು ಒಂದೋ, ಎರಡೋ
ಅಳಿಸಿದೆ ಸಂತತಿ ಹೀಗೇ....
Creative Writings
