Karada Vishwa

Article · July 6, 2026

ಇರಲಿ ಹೀಗೇ

- ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ

ಮನೆಯ ಮುಂದೆ ಬೆಳೆದು ನಿಂತ

ಮರಗಳಿತ್ತು ನೂರು |

ತಂಪುಗಾಳಿ, ಪುಷ್ಪ ಘಮಕೆ

ಮನಸು ಹೋಯ್ತ ಮಾರು Il

ಅದರಲೊಂದು ಮರದ ಮೇಲೆ

ಕೋಗಿಲೆಯಾ ಗೂಡು |

ಮಾರ್ದನಿಸಿತು ವನದೊಳೆಲ್ಲ

ಕೋಗಿಲೆಯಾ ಹಾಡು ||

ಕೇಳಿದಾಗ ಸ್ವರ್ಗಲೋಕ

ಧರೆಗೆ ಇಳಿದ ಹಾಗೆ |

ದೇವರನ್ನು ಬೇಡಿಕೊಂಡೆ

ಇರಲಿ ಪ್ರಕೃತಿ ಹೀಗೆ||

Creative Writings