Karada Vishwa

News · October 5, 2025

ಪಡ್ರೆ ಕುಂಟಿಕ್ಕಾನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸಂಪನ್ನ

ವರದಿ ಕೃಪೆ : ಕುಂಟಿಕ್ಕಾನ ಬಾಲಕೃಷ್ಣ ಭಟ್, ಕಕ್ಕೂರು

ಪಡ್ರೆ ಕುಂಟಿಕ್ಕಾನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ , ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ತನಕ ನವರಾತ್ರಿ ಉತ್ಸವದ ಸಂದರ್ಭದಲ್ಲಿ, ನಿತ್ಯಪೂಜೆ, ರುದ್ರಾಭಿಷೇಕ, ಪವಮಾನ ಅಭಿಷೇಕ, ಸಪ್ತಶತೀ ಪಾರಾಯಣ, ತುಲಾಭಾರ ಸೇವೆ, ಕಲಶ ಸ್ನಾನ, ನೈವೇದ್ಯ, ಮಹಾಪೂಜೆ, ತೀರ್ಥ ಪ್ರಸಾದ, ಅನ್ನಪ್ರಸಾದ, ಭಜನೆ, ಲಲಿತಾ ಸಹಸ್ರನಾಮ ಪಾರಾಯಣ, ಯಕ್ಷಗಾನ ತಾಳಮದ್ದಳೆ, ದೀಪಾರಾಧನೆ ಇತ್ಯಾದಿಗಳಿಂದ ಸಂಪನ್ನಗೊಂಡಿತು.
ನಿತ್ಯವೂ ಹಲವಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದು ಪ್ರಾರ್ಥಿಸಿದರು.

ಪಡ್ರೆ ಕುಂಟಿಕ್ಕಾನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸಂಪನ್ನ