
News · November 30, 2025
ಡಾ. ಶ್ರೀ ಮಂದಾರ ರಾಜೇಶ್ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು
ರಾಷ್ಟ್ರ ಮಟ್ಟದಲ್ಲಿ ಸಿಕ್ಕಿರುವ ಗೌರವ- ‘ಎಕ್ಸೆಲೆನ್ಸ್ ಇನ್ ರೀಜನಲ್ ಮೀಡಿಯಾ ಪ್ರಶಸ್ತಿ’
ಪ್ರಾದೇಶಿಕ ಪತ್ರಿಕೋದ್ಯಮ, ತುಳು ಕನ್ನಡ ಸಂಸ್ಕೃತಿ ರಕ್ಷಣೆ, ಜನಪದ ಪ್ರಚಾರ ಮತ್ತು ಸ್ಥಳೀಯ ಪ್ರತಿಭೆಗಳ ದಾಖಲಾತಿ ವಿಸ್ತರಣೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶ್ರೀ ಮಂದಾರ ರಾಜೇಶ್ ಭಟ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸಿಕ್ಕಿರುವ ಗೌರವ ‘ಎಕ್ಸೆಲೆನ್ಸ್ ಇನ್ ರೀಜನಲ್ ಮೀಡಿಯಾ ಪ್ರಶಸ್ತಿ’ ಅತೀ ಶ್ಲಾಘನೀಯ.
ನಮ್ಮ ಕರಾಡ ಸಮುದಾಯದ ಹೆಮ್ಮೆ ಹೆಚ್ಚಿಸಿರುವ ಇವರ ಕಾರ್ಯನಿಷ್ಠೆ, ಸಂಯಮ, ಮೌಲ್ಯಾಧಾರಿತ ಸೇವಾಭಾವಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ರಾಜೇಶ್ ಭಟ್ ಅವರ ನಿಸ್ವಾರ್ಥ ಸೇವೆ, ನಾಯಕತ್ವ ಹಾಗೂ ಸಮಾಜಮುಖಿ ಚಟುವಟಿಕೆಗಳು ಮತ್ತಷ್ಟು ಉನ್ನತಿಗೆ ಏರಲಿ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಗೌರವಗಳು ಇವರದ್ದಾಗಲಿ ಎಂದು ಹಾರೈಸುತ್ತೇವೆ.
ಶುಭಾಶಯಗಳು...
- ಕರಾಡ ವಿಶ್ವ ತಂಡ.


