
Article · July 12, 2026
ಮುಕ್ತಕಗಳು
-- ವೀಣಾ ಎಂ ಭಟ್
೧
ಸೂರಿನಡಿಯಲಿ ಸಿಗುವ ಸುಖ ಶಾಂತಿ ನೆಮ್ಮದಿಗೆ
ನಾರಿಯಲಿ ಇರಬೇಕು ಪ್ರೇಮ ಸಿಂಚನವು
ಸಿರಿಯು ಸಂಪದವಿದ್ದು ಸತಿಯು ಸಹಕರಿಸದಿರೆ
ಭೂರಿ ಭೋಜನಕೇನು ಫಲ ವೀಣಗಾನ
೨
ಪಾಲಿನ ಪೈಪೋಟಿಯಲಿ ಸಹೋದರರ ಹೋರಾಟ
ಶೂಲದಂತೆ ಇರಿವ ಮಾತಲ್ಲಿ ಹೊಡೆತ
ಗೆಲುವಿಗಾಗಿ ಸತತ ಕೋರ್ಟು ಕಟಕಟೆಯನು ಏರಿ
ಪೋಲಾಗುತಿದೆ ಸ್ವತ್ತು ವೀಣಗಾನ
Creative Writings
