Karada Vishwa

Article · November 3, 2026

ಚುಟುಕುಗಳು

By ರಾಧಾಕೃಷ್ಣ ಭಟ್ ಕುರುಮುಜ್ಜಿ

ರಾಧಾಕೃಷ್ಣ ಭಟ್ ಕುರುಮುಜ್ಜಿ

ಬಿಲ್ಲು?

ಅಂದು ಶ್ರೀರಾಮ ಮುರಿದದ್ದು
ಮಿಥಿಲೆಯಲ್ಲಿ ಶಿವನದ್ದೊಂದೇ ಬಿಲ್ಲು
ಮದುವೆಯಂದು ಜನಕರಾಜ ಕೇಳಿದ್ದು
ಕೆಲವರಲ್ಲಿ ಸ್ವಾಮೀ ನಿಮ್ಮದೆಷ್ಟು ಬಿಲ್ಲು?

ತಾಕತ್ತಿದ್ರೆ - ತಾ ಕತ್ತಿ-ಇದ್ರೆ

ಗುಂಡನ ಜಂಭದ ನುಡಿ ಸತಿಯಲ್ಲಿ
ನಾನೇನನ್ನೂ ಮಾಡಬಲ್ಲೆ ತಾಕತ್ತಿದ್ರೆ
ಅದಕ್ಕೆ ಅವಳೆಂದಳು ಆತನಲ್ಲಿ
ನನ್ನ ರಾಯರಿಗೆ ಅಷ್ಟೂ ತಾಕತ್ತಿದ್ರೆ
ಇಂಜಿತ್ತಾಯರಿಗೆ ಮೆಣಸು ಕೊಯ್ದು ಕೊಡಿ
ಆಗ ಅವನೆಂದ ಹಾಗಾದ್ರೆ ತಾ-ಕತ್ತಿ ಇದ್ರೆ

ಪೀಡಿಸಹುದು?


ಮದುವೆಯಂದು ವರಕೊಟ್ಟು
ವೈದಿಕ ವರ್ಗದವರ ದಕ್ಷಿಣೆ
ಬಳಿಕ ವಧುವನ್ನು ತವರಲ್ಲೆ ಬಿಟ್ಟು
ಪೀಡಿಸಬಹುದು ಅವಳನ್ನು
ತರಬೇಕೆಂದು ವರದಕ್ಷಿಣೆ

ನೆನಪಾಗಿ

ಮೊನ್ನೆ ಬ್ಯಾಗ್ ಮರೆತು ಹೋದಾಗ ಪೇಟೆಗೆ
ಅರ್ಧದಾರಿಯಿಂದ ನೆನಪಾಗಿ ಬಂದೆ ಮನೆಗೆ
ಮಡದಿ ಕೇಳಿದಳು ನೀವು ಮರೆತದ್ದು ಬ್ಯಾಗಾ?
ತಲೆಯಾಡಿಸಿ ಹೇಳಿದೆ ತಂದುಕೊಡು ಬೇಗ

ಕಾರಣ?

ಕೆಲವು ಕಾರ್ಯಕ್ರಮಗಳಿಗೆ ಹೋಗಲು
ಹೇಳುವಳು ನನ್ನವಳು ನೀವೂ ಬನ್ನಿ
ಹೇಳುವಳು ಕಾರಣವೇನು? ಕೇಳಲು
ಆಮಂತ್ರಣ ಪತ್ರಿಕೆಯಲ್ಲೆ ಇದೆಯಲ್ಲ
ನೀವೂ ಬನ್ನಿ ನಿಮ್ಮ-ವರನ್ನೂ ಕರೆತನ್ನಿ
ನಾನು ಹೇಗೆ ಕರೆದೊಯ್ಯಲಿ ಅವಳನ್ನು?
ಕಾರಣ ಇಲ್ಲವಲ್ಲ ಅದರಲ್ಲಿ ನಿಮ್ಮವಳನ್ನು

Creative Writings