Karada Vishwa

News · October 26, 2026

ಶ್ರೀ ಕ್ಷೇತ್ರ ಮಲ್ಲದಲ್ಲಿ ನವರಾತ್ರಿ ಮಹೋತ್ಸವ

ಶ್ರೀ ಕ್ಷೇತ್ರ ಮಲ್ಲದಲ್ಲಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 11 ಕ್ಕೆ ಗಣಪತಿ ಪೂಜೆಯೊಂದಿಗೆ ಪ್ರಾರಂಭ ಗೊಂಡಿತು. ಪ್ರತಿ ದಿನವೂ ಅಮ್ಮನವರಿಗೆ ನವಕಾಭಿಷೇಕ, ವಿಶೇಷ ಅರ್ಚನೆ , ಚತುರ್ವೇದ ಪಾರಾಯಣ , ನವರಾತ್ರಿ ಪೂಜೆಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ತುಲಾಬಾರ ಸೇವೆಗಳು ನೆರೆವೇರಿತು.

ಆಕ್ಟೋಬರ್ 16 ಕ್ಕೆ ಶಾರದಾಪೂಜೆ / ಗ್ರಂಥ ಪೂಜೆ ಪ್ರಾರಂಭಗೊಂಡಿತು ಹಾಗೂ ಮಹಾನವಮಿಯಂದು ನವಚಂಡಿಕಾ ಹೋಮ ನೆರವೇರಿಸಲಾಯಿತು ಅದೇ ದಿನ ಭಕ್ತರ ವಾಹನ ಪೂಜೆಗಳು ನಡೆಯಿತು. ವಿಜಯ ದಶಮಿಯಂದು ಹಲವು ಮಕ್ಕಳಿಗೆ ವಿದ್ಯಾರಂಭ ವನ್ನು ಮಾಡಲಾಯಿತು, ನವಾನ್ನ ಪ್ರಸಾದವನ್ನು ಸ್ವೀಕರಿಸಿ ಭಕ್ತರೆಲ್ಲರೂ ಕೃತಾರ್ಥರಾದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಶಾಸ್ತ್ರೀಯ ಸಂಗೀತ, ಸಹಸ್ರನಾಮ ಪಾರಾಯಣ, ಚಂಡೆ, ತಿರುವಾತಿರಕಳಿ ಹೀಗೆ ಹಲವು ಸೇವೆಗಳನ್ನು ನಡೆಸಿಕೊಟ್ಟರು.

Temples
ಶ್ರೀ ಕ್ಷೇತ್ರ ಮಲ್ಲದಲ್ಲಿ ನವರಾತ್ರಿ ಮಹೋತ್ಸವ