
Article · November 7, 2026
ಪೃಕೃತಿಯ ಲೀಲೆ
ವೀಣಾ ಎಂ ಭಟ್
ಅತಿವೃಷ್ಟಿ ಅನಾವೃಷ್ಟಿ ಕಾಲದ ಮಹಿಮೆಯೊ
ಪೃಕೃತಿಯ ಲೀಲೆ ಇದು ದೈವದ ವಿಕೃತಿಯೊ
ವನಗಳ ನಶೀಕರಣ ಮನುಜನ ಅತಿಕ್ರಮಣ
ಒಯ್ಯುವನು ನಾಶದೆಡೆ ದೈವದತ್ತದ ತಾಣ
ಹಸಿರಿನ ಚಾದರವು ಭುವನ ಸಿಂಗಾರಿಗೆ
ಅರಳಿನಿಂತಿದೆ ಚಿಗುರು ವರುಷದ ಧಾರೆಗೆ
ಕಳೆ ಬಿಡಿಸಲು ರೈತ ಭಾರಿ ಕಂಗಾಲು
ತಿಂಗಳಾಗುವ ಮುನ್ನ ಬಂತಲ್ಲ ಹುಯಿಲು
ಕಣ್ಮನ ತಣಿಸುವ ಪೀತವರ್ಣದ ಸುಮವು
ಎಲ್ಲೆಂದರಲ್ಲಿ ಚಿಗುರುವ ಬಳ್ಳಿಗಳ ತೋರಣವು
ಬೇರುಗಳು ಭದ್ರಕೋಟೆಯ ತರಹ ನೆಲಕೂರಿ
ಹುಲುಸಾಗಿ ಸಂಸಾರ ಸರಸರನೆ ಚಿಗುರಿ
ಸಸಿಗೆ ನೀಡುವ ರಸಗೊಬ್ಬರವ ಹೀರಿ
ಮಂಗಮಾಯ ಬಲು ಬೇಗನೆ ಇಳುವರಿ
ಬೇಸಾಯಗಾರನಿಗೆ ಎಲ್ಲೆಡೆಗೂ ಸವಾಲು
ಮಳೆಗೆ ಒಣಗದೆ ಅಡಿಕೆ ಕಾರ್ಯದಲಿ ಸೋಲು
Creative Writings
