
Article · November 25, 2025
ಕಾಶಿ ಹಲ್ವಾ (ಕುಂಬಳಕಾಯಿ ಹಲ್ವ)
--ಪಲ್ಲವಿ , ಗಿರಿ
ಸಾಮಗ್ರಿಗಳು:
– ಕುಂಬಳಕಾಯಿ (ತುರಿದು – 2 ಕೆಜಿ )
– ಸಕ್ಕರೆ – 1/2 ಕೆಜಿ
– ತುಪ್ಪ – 250ml
– ಏಲಕ್ಕಿ – 2
– ಗೋಡಂಬಿ – ತುಪ್ಪದಲ್ಲಿ ಹುರಿದದ್ದು
ತಯಾರಿಸುವ ವಿಧಾನ:
ಕುಂಬಳಕಾಯಿಯನ್ನು ಸಿಪ್ಪೆ ಮತ್ತು ಬೀಜ ತೆಗೆದು ತುರಿದಿಟ್ಟುಕೊಳ್ಳಿ. ಬಾಣಲೆ ಯಲ್ಲಿ 2 ಚಮಚ ತುಪ್ಪ ತುರಿದ ಕುಂಬಳಕಾಯಿಯನ್ನು ಹಾಕಿ ಬೇಯಿಸಿ. ನೀರು ಆರುತ್ತಾ ಬಂದಂತೆ ಸಕ್ಕರೆ ಸೇರಿಸಿ . ಸಕ್ಕರೆ ಕರಗಿ ಮಿಶ್ರಣ ಗಟ್ಟಿ ಆಗುವವರೆಗೆ ಸ್ವಲ್ಪ ಸ್ವಲ್ಪ ತುಪ್ಪಸೇರಿಸಿಕೊಳ್ಳಿ . ತಳ ಬಿಟ್ಟಮೇಲೆ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಬಣ್ಣ ಹಾಕದ ರುಚಿಕರವಾದ ಕಾಶಿ ಹಲ್ವಾ ತಯಾರಾಗುತ್ತದೆ.
ಈ ಹಲ್ವಾವನ್ನು ಬಿಸಿಬಿಸಿಯಾಗಿ ಅಥವಾ ಒಂದು ಸ್ಕೂಪ್ ಐಸ್ಕ್ರೀಂ ಜೊತೆ ಕುಟುಂಬದೊಂದಿಗೆ ಆಸ್ವಾದಿಸಬಹುದು.
ಲಿಂಕ್ : https://youtube.com/shorts/CF-SGwIMQYo?feature=shared
Food
