Karada Vishwa

Article · June 25, 2026

ಮುದ್ದು ಕೃಷ್ಣ

✍️ದಿವ್ಯಾ ಬಿ. ಶಿರಂತಡ್ಕ

ಆಹಾ ಏನಿದು ನಿನ್ನಯ ರೂಪ..

ಬೇರೆ ಕಾಣುವುದು ಅಪರೂಪ..

ಪುಟ್ಟ ಪಾದದಿ ಹೆಜ್ಜೆಯನಿಡುತಾ

ಕುಣಿಯುವೆ ನೀ ತೈ ತಕಾ ತಕಾ..

ಬಾಗಿಲ ಸಂದಿಯೊಳಾಡುತ ನೀನು

ಯಾರನು ನೋಡುತಲಿರುವೆ?..

ಏನೋ ಸಂಚನು ಮಾಡಲು‌ ತಾನೆ

ಮೋರೆಯ ಬಿಗಿದಿರುವೆ!...

ಅಮ್ಮ ಯಶೋದಾ ಬಂದರೆ ಬಳಿಗೆ

ನಡೆವುದು ನಿನ್ನದೇ ಆಟ...

ಹಟವನು ಹೂಡಿ ಮುದ್ದನು ಮಾಡಿ

ಮತ್ತೆ ಕೊಡುವೆ ನೀ ಕಾಟ!

ಅಣ್ಣ ರಾಮನೂ ಜೊತೆ ಸೇರಿದರೆ

ಸ್ವರ್ಗಕೆ ಮೂರೇ ಗೇಣು ..

ಯಾರೇ ಬೈದರೂ ನೀ ತಲೆ ಕೆಡಿಸದೆ

ಆಡಿಸುವೆಯಲ್ಲ ಗೋಣು!

ಬೇಕಿರುವುದು ನಿನಗೇನೆಂಬುದನು

ಚೆನ್ನಾಗಿ ಬಲ್ಲೆ ನಾನು...

ಹಾಲು ಮೊಸರು ಬೆಣ್ಣೆಯ ಕೊಟ್ಟರೆ

ಗಾಳಕ್ಕೆ ಸಿಕ್ಕ ಮೀನು!...

ನೀನು...

ಗಾಳಕ್ಕೆ ಸಿಕ್ಕ ಮೀನು!...

✍️ಸಾಗರಿ

Creative Writings