Karada Vishwa

Article · June 16, 2026

ಚುಟುಕುಗಳು

✍🏻ರಾಧಾಕೃಷ್ಣಭಟ್ ಕುರುಮುಜ್ಜಿ

           ಏಕಾಗ್ರತೆ?               

ಗುಂಡನೆಂದ ಮಡದಿಯಲ್ಲಿ
ಏಕಾಗ್ರತೆ ಇಲ್ಲದವಳು ನೀನೇ
ಪೂಜೆ ಮಾಡುವಾಗ ಅವಳಲ್ಲಿ
ಕೇಳಿದ ಚಹಾತಿಂಡಿ ಆಯಿತೇನೇ?

     ಕಾರಣ?        

ಮನೆಗೆ ನೆಂಟರು ಬರುವಾಗ
ಸಂತಸದಿಂದ ನನಗೇಕೆ ನಗೆ?
ಅವರಿಗೆ ಚಹಾ ಕೊಡುವಾಗ
ಸ್ವಲ್ಪ ಸಿಗಬಹುದೆಂದು ನನಗೆ

             ಪರಿಣಾಮ!            

ಹೊಸ ಸಂಶೋಧನೆಯ ಮದ್ದು ಗುಂಡನದ್ದು
ಸರ್ವವ್ಯಾಧಿ ಶಮನಿ ಎನ್ನುವ ಹೆಸರಿನದ್ದು
ಪ್ರಾಯೋಗಿಕವಾಗಿ ಅವನೇ ಅದನ್ನು ಸೇವಿಸಿ
ಹೊಟ್ಟೆನೋವಾಗಿ ಹೇಳಿದ ಆಸ್ಪತ್ರೆಗೆ ಸೇರಿಸಿ

             ಪೇ ಮೆಂಟ್?          

ತರಕಾರಿ ಬಳ್ಳಿಗೆ ಸಂಪಟ ಕಟ್ಟಲು
ಅಂಗಡಿಗೆ ಹೋದೆ ತರಲು ಕೋಪೆ
ನನ್ನಲ್ಲಿ ಹಣವಿರಲಿಲ್ಲ ಕೊಡಲು
ಕೂಡಲೇ ಮಾಡಿದೆ ಗೂಗಲ್ ಪೇ
ಎಲ್ಲರೆದುರಲ್ಲಿಆಗದೆ ನಾನು ಚಪ್ಪೆ



Creative Writings
ಚುಟುಕುಗಳು