Karada Vishwa

News · August 21, 2026

ಶಿಕ್ಷಣ, ಸಾಹಿತ್ಯ ಕ್ಷೇತ್ರದ ಸಾಧನೆಗೆ ಎಸ್. ಎನ್. ಭಟ್ ಸೈಪಂಗಲ್ಲು ಅವರಿಗೆ ಗೌರವ ಸನ್ಮಾನ

ಕರಾಡ ವಿಶ್ವದ ಅಭಿನಂದನೆಗಳು...

ದಿನಾಂಕ 15-08-2026 ರಂದು ನಡೆದ ೮೦ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಎಣ್ಮಕಜೆ ಗ್ರಾಮ ಪಂಚಾಯಿತಿಯ ವತಿಯಿಂದ ಶಿಕ್ಷಣ, ಸಾಹಿತ್ಯ, ತರಬೇತಿ ಹಾಗೂ ಮಾರ್ಗದರ್ಶನ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಶ್ರೀಯುತ ಎಸ್. ಎನ್. ಭಟ್ ಸೈಪಂಗಲ್ಲು ಅವರನ್ನು ಗೌರವಿಸಲಾಯಿತು.

ಭಾರತೀ ಸದನದಲ್ಲಿ ನಡೆದ ಈ ಸಮಾರಂಭದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಅವರು ಎಸ್. ಎನ್. ಭಟ್ ಸೈಪಂಗಲ್ಲು ಅವರನ್ನು ಸನ್ಮಾನಿಸಿ ಗೌರವಿಸಿದರು.

Achievers
ಶಿಕ್ಷಣ, ಸಾಹಿತ್ಯ ಕ್ಷೇತ್ರದ ಸಾಧನೆಗೆ ಎಸ್. ಎನ್. ಭಟ್ ಸೈಪಂಗಲ್ಲು ಅವರಿಗೆ ಗೌರವ ಸನ್ಮಾನ