
Article · July 18, 2026
ಮೊದಲೊಂದಿಪೆನಿನಗೆ
---ರಾಧಾಕೃಷ್ಣ ಭಟ್ ಕುರುಮುಜ್ಜಿ
(ಧಾಟಿ - ನಂಬಿದೆ ನಿನ್ನಾ ನಾಗಾಭರಣ)
ಮೊದಲೊಂದಿಪೆನಿನಗೆ ಪಾರ್ವತಿತನಯಾ
ಭಕ್ತರಿಗೀಯೋ ಅಭಯಾ
ನಿನ್ನೀ ನಾಮವ ಜಪಿಸಿ
ಶ್ರೀಗಣನಾಥನ ಸ್ಮರಿಸಿ
ನಮಿಸಲು ಕಾರ್ಯಕೆ ಶುಭವನ್ನೀಯುವೆ
ಗಂಗಣಪತಯೇ ನಮೋ ನಮೋ
||ಮೊದಲೊಂದಿಪೆ||
ಮೋದಕಪ್ರಿಯ ಗಣನಾಥ ನಿನ್ನೀ ನಾಮವೆ ಅಮೃತ
ತೋರೊ ದಯಾಕಾರ್ಯ ಜಯ
ಆಗಲು ಪೂಜೆಯ ಮಾಡುವೆವಯ್ಯಾ
ವಂದನೆ ನಿನಗೆ ಗಣಪಯ್ಯ
||ಮೊದಲೊಂದಿಪೆ||
ಭಕ್ತರ ಪೂಜೆಗೆ ಒಲಿದೂ ಹರಸುವೆ
ಭಕ್ತರಿಗೊಲಿದು
ಗಜವದನಾ ಕೊಡು ಗಮನ
ನಿನ್ನೀ ನಾಮವು ಪಾವನವಯ್ಯಾ
ಪಾಲಿಸು ಶಂಕರಕುವರ
||ಮೊದಲೊಂದಿಪೆ||
Creative Writings
