Karada Vishwa

Event · January 28, 2026

Launch 2.0 – ಕರಾಡ ವಿಶ್ವ CommunityCCp App- ಹೊಸ ವೈಶಿಷ್ಟ್ಯಗಳ ಲೋಕಾರ್ಪಣೆ ಸಮಾರಂಭ

📅 ದಿನಾಂಕ: ಜನವರಿ 31, 2026 (ಶನಿವಾರ) ⏰ ಸಮಯ: ಸಂಜೆ 7:30 💻 ವೇದಿಕೆ: Google Meet

ಪ್ರೀತಿಯ ಕರಾಡ ಬಂಧುಗಳೇ,

‘ಕರಾಡ ವಿಶ್ವ’ CommunityCCP App‌ ನ ಹೊಸ ವೈಶಿಷ್ಟ್ಯಗಳ ಲೋಕಾರ್ಪಣಾ ಸಮಾರಂಭಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ.

ಕರಾಡ ಸಮಾಜದ ಹಿತೈಷಿಗಳ ಪ್ರೋತ್ಸಾಹ ಹಾಗೂ ಸಹಕಾರದಿಂದ, ನಮ್ಮ ಮಹತ್ವಾಕಾಂಕ್ಷೆಯ ‘ಕರಾಡ ವಿಶ್ವ’ ಮೊಬೈಲ್ ಆಪ್ ಕಳೆದ ವರ್ಷ ಜುಲೈ 21ರಂದು ಶೃಂಗೇರಿ ಜಗದ್ಗುರುಗಳ ಅಮೃತ ಹಸ್ತದಿಂದ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿತು.
ಸಮಾಜ ಬಾಂಧವರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ‘ಕರಾಡ ವಿಶ್ವ’ ತಾಂತ್ರಿಕ ತಂಡ ಐದು ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದೆ. Launch 2.0 ಅಡಿಯಲ್ಲಿ ಮೊದಲ ಹಂತವಾಗಿ Media, Reels ಹಾಗೂ Nithya Pushpa ವೈಶಿಷ್ಟ್ಯಗಳ ಲೋಕಾರ್ಪಣೆ ನಡೆಯಲಿದೆ.

🔹 ಕಾರ್ಯಕ್ರಮದ ವಿವರಗಳು
📅 ದಿನಾಂಕ: ಜನವರಿ 31, 2026 (ಶನಿವಾರ)
⏰ ಸಮಯ: ಸಂಜೆ 7:30
💻 ವೇದಿಕೆ: Google Meet

----------------------
🔹ಹಂತಹಂತವಾಗಿ ಶೀಘ್ರದಲ್ಲೇ   ಲೋಕಾರ್ಪಣೆಗೊಳ್ಳಲಿರುವ ‘ಕರಾಡ ವಿಶ್ವ’ ಆಪ್‌ನ ಪ್ರಮುಖ ವೈಶಿಷ್ಟ್ಯಗಳು: 
1. Media, Reels & Nithya Pushpa
2. Matrimony 
3. Employment 
4. Business Profile  & Temple Profile
5. Health Aid & Blood Donation (ಕರಾಡ ಸಹಾಯಕ ಬಂಧು)

Launch 2.0 – ಕರಾಡ ವಿಶ್ವ CommunityCCp App- ಹೊಸ ವೈಶಿಷ್ಟ್ಯಗಳ ಲೋಕಾರ್ಪಣೆ ಸಮಾರಂಭ