
News · January 1, 2026
ಕಾವ್ಯ ಬೇಂದ್ರೋಡು ಅವರಿಗೆ ಹಾರ್ದಿಕ ಅಭಿನಂದನೆಗಳು
ಪಾಂಡಿಚೇರಿ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಎಂ.ಎ. ಹಿಂದಿ ವಿಷಯದಲ್ಲಿ ಚಿನ್ನದ ಪದಕ ಹಾಗೂ ಉತ್ತಮ ವಿದ್ಯಾರ್ಥಿನಿ ಮತ್ತು ವಿಶೇಷ ಸಾಮರ್ಥ್ಯ (Differently Abled) ವರ್ಗದಲ್ಲಿಯೂ ಅತ್ಯುತ್ತಮ ಸಾಧನೆ.
ಗೋವಿಂದ ಭಟ್ ಬೇಂದ್ರೋಡು ಅವರ ಪುತ್ರಿ ಕಾವ್ಯ ಬೇಂದ್ರೋಡು ಅವರು ಪಾಂಡಿಚೇರಿ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಎಂ.ಎ. ಹಿಂದಿ ವಿಷಯದಲ್ಲಿ ಚಿನ್ನದ ಪದಕ ಪಡೆದಿರುವುದು ಹಾಗೂ ಉತ್ತಮ ವಿದ್ಯಾರ್ಥಿನಿ ಮತ್ತು ವಿಶೇಷ ಸಾಮರ್ಥ್ಯ (Differently Abled) ವರ್ಗದಲ್ಲಿಯೂ ಅತ್ಯುತ್ತಮ ಸಾಧನೆಗೈದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಅವಿರತ ಪರಿಶ್ರಮ, ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದ ಮೂಲಕ ಕಾವ್ಯ ಅವರು ಸಾಧಿಸಿದ ಈ ಅಪೂರ್ವ ಯಶಸ್ಸು ಕರಾಡ ಸಮುದಾಯಕ್ಕೂ, ಸಮಾಜಕ್ಕೂ ಪ್ರೇರಣೆಯಾಗಿದೆ. ಅವರ ಈ ಸಾಧನೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಕರಾಡ ವಿಶ್ವ ಹಾರೈಸುತ್ತದೆ.
ಕಾವ್ಯ ಬೆಂದ್ರೋಡು ಅವರಿಗೆ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು ಹಾಗೂ ಮುಂದಿನ ಜೀವನದಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಹಾಗೂ ವೃತ್ತಿಪರ ಯಶಸ್ಸುಗಳನ್ನು ಗಳಿಸಲಿ ಎಂಬ ಶುಭಾಶಯಗಳು.
Women
